ಆಲೂರು: ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಪ್ಪಿನಹಳ್ಳಿ ಗ್ರಾಮದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ಪ್ರತಿ ಮನೆ ಮನೆಗೂ ನೀರು ಪೂರೈಸುವುದು ಜಲಜೀವನ್ ಮಿಷನ್ ಯೋಜನೆಯ ಉದ್ದೇಶವಾಗಿದೆ. ಗ್ರಾಮೀಣ ಮಹಿಳೆಯರಿಗೆ ಈ ಯೋಜನೆ ಹೆಚ್ಚು ಅನುಕೂಲವಾಗಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಹೇಮಾ ಮಂಜೇಗೌಡ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ನಿರ್ದೇಶಕ ರವಿ, ಸದಸ್ಯ ರುದ್ರೇಗೌಡ, ಗಣೇಶ್, ನಂಜುಂಡಪ್ಪ, ರವಿಕುಮಾರ್, ವನಜಾಕ್ಷಿ, ಗಿರೀಶ್, ಬಿಜೆಪಿ ಮುಖಂಡ ಕಣಗಾಲ್ ಲೋಕೇಶ್, ಅಜಿತ್ ಕಣಗಾಲ್, ಹನುಮಂತೇಗೌಡ, ಮಂಜೇಗೌಡ, ಕಾಂತರಾಜ್, ಇಂಜಿನಿಯರ್ ಶರತ್, ಗುತ್ತಿಗೆದಾರ ರಂಗೇಗೌಡ ಇತರರಿದ್ದರು.