ಚಿತ್ರದುರ್ಗ: ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಅವರ ಬೆಳ್ಳಿ ಮೂರ್ತಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ಚಿತ್ರದುರ್ಗದ ರಾಜಬೀದಿಗಳಲ್ಲಿ ಶನಿವಾರ ಸಂಚರಿಸಿತು. ಸಂಸದ ಗೋವಿಂದ ಎಂ ಕಾರಜೋಳ ಚಾಲನೆ ನೀಡಿದರು.
ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ್, ಡಾ.ಬಸವಕುಮಾರ ಶ್ರೀ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಬಸವಪ್ರಭು ಶ್ರೀ, ಡಾ.ಬಸವ ರಮಾನಂದ ಶ್ರೀ, ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ, ಬಸವಮೂರ್ತಿ ಕುಂಬಾರ ಗುಂಡಯ್ಯ ಶ್ರೀ, ಸಿದ್ಧಬಸವ ಕಬೀರ ಶ್ರೀ, ಬಸವ ಲಿಂಗಮೂರ್ತಿ ಶ್ರೀ, ಮಲ್ಲಿಕಾರ್ಜುನ ಶ್ರೀ, ಶಿವಾನಂದ ಶ್ರೀ, ಬಸವ ಚೇತನ ಶ್ರೀ, ಚನ್ನಬಸವ ಶ್ರೀ, ತಿಪ್ಪೇರುದ್ರ ಶ್ರೀ, ಮುಖಂಡರಾದ ಕೆ.ಸಿ.ನಾಗರಾಜ್, ಪಟೇಲ್ ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಎಸ್‌ಎಂಎಲ್ ತಿಪ್ಪೇಸ್ವಾಮಿ, ಮಂಜುನಾಥ್ ಗೊಪ್ಪೆ, ಸಿದ್ಧಾಪುರ ನಾಗಣ್ಣ ಇತರರಿದ್ದರು.