ಕಲಬುರಗಿ: ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಹಿಂದಿನ ನಿರ್ದೇಶಕರಾಗಿದ್ದ ಡಾ.ಸಿ.ಎನ್.ಮಂಜುನಾಥ ಕಟ್ಟಿಸಿಲ್ಲ. ಸರ್ಕಾರ ಕಟ್ಟಿದೆ ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
ಕಲಬುರಗಿಗೆ ಜಯದೇವ ಆಸ್ಪತ್ರೆ ತಂದವರು ಸಚಿವ ಡಾ.ಶರಣಪ್ರಕಾಶ ಪಾಟೀಲ್. ಡಾ.ಮಂಜುನಾಥ ಅವರು ಕೇವಲ ನಿರ್ದೇಶಕರಾಗಿದ್ದರು. ಅವರು ಕಟ್ಟಿಸಿಲ್ಲ ಎಂಬುದು ಅಶೋಕ್ ಅವರು ಅರ್ಥ ಮಾಡಿಕೊಳ್ಳಬೇಕು. ಈಗ ಅವರ ಪಕ್ಷದ ಸಂಸದರಾಗಿದ್ದಾರೆ ಎಂದು, ಡಾ.ಮಂಜುನಾಥ ಅವರು ಕಟ್ಟಿಸಿದ ಆಸ್ಪತ್ರೆಗೆ ಕಾಂಗ್ರೆಸ್‌ನವರು ಕೆಟ್ಟ ಹೆಸರು ತರುತ್ತಿದ್ದಾರೆ ಎನ್ನುವುದು ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಕಲಬುರಗಿಯಲ್ಲಿ ನಿರಂತರ ನೀರು ಸರಬರಾಜು ಮಾಡುವ ಹೊಣೆ ಹೊತ್ತಿರುವ ಎಲï ಆ್ಯಂಡ್ ಟಿ ಕಂಪನಿ ಸರಿಯಾಗಿ ಕಾಮಗಾರಿ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳು ಬರುತ್ತಿವೆ. ಬೆಂಗಳೂರಿನಲ್ಲಿ ಮುಖ್ಯಕಾರ್ಯದರ್ಶಿಗಳ ಮಟ್ಟದಲ್ಲಿ ಸಿಎಂ ಸಭೆ ನಡೆಸಿ ಕಂಪನಿಯ ಎಂಡಿ ಜತೆಗೆ ಚರ್ಚಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಂಪನಿ ಹಲವಾರು ಕಡೆ ರಸ್ತೆ ಹಾಗೂ ಭೂಮಿ ಅಗೆದು ವೈe್ಞÁನಿಕವಾಗಿ ಮುಚ್ಚದೆ ಬಿಟ್ಟಿರುವುದು ಗಮನಕ್ಕೆ ಬಂದಿದೆ. ಲೋಪದೋಷಗಳಿವೆ, ಅವುಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.
ಮುಂಗಾರು ಮಳೆಯಾಗಿದ್ದರಿಂದ ನಗರದಲ್ಲಿ ರಾಡಿ ಮಿಶ್ರಿತ ನೀರು ಸರಬರಾಜು ಆಗುತ್ತಿದೆ. ಯಾವುದೇ ಕಾರಣಕ್ಕೂ ಕಲುಷಿತ ನೀರು ನಗರ ಪೂರೈಕೆಯಾಗಬಾರದು. ಕುಡಿವ ನೀರಿನ ಬಗ್ಗೆ ನಿರ್ಲಕ್ಷÈ ವಹಿಸಿದರೆ ಸಂಬAಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.