ಜಿಲ್ಲೆ

ಜಯದೇವ ಆಸ್ಪತ್ರೆ: ಜೂ.12ರಿಂದ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ

ಮೈಸೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜೂ.12 ರಿಂದ 18ವರೆಗೆ 200 ಬಡರೋಗಿಗಳಿಗೆ ಉಚಿತವಾಗಿ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಅಮೆರಿಕದ ಮೆಡ್ಟ್ರಾನಿಕ್ಸ್, ಡಾ.ಗೋವಿಂದರಾಜು ಸುಬ್ರಹ್ಮಣಿ ಹಾರ್ಟ್ ಫೌಂಡೇಷನ್ ಸಹಯೋಗದೊಂದಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಜೂ.12 ರಿಂದ 14ರವರೆಗೆ ಮತ್ತು ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಜೂ.15ಮತ್ತು 16ರವರೆಗೆ, ಕಲಬುರಗಿ ಜಯದೇವ ಆಸ್ಪತ್ರೆಯಲ್ಲಿ ಜೂ.17 ಮತ್ತು 18ರಂದು ಉಚಿತವಾಗಿ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಆಯೋಜಿಸಲಾಗಿದೆ.

ಪ್ರತಿ ರೋಗಿಗೂ ಉನ್ನತ ಮಟ್ಟದ ಮೆಡಿಕೇಟೆಡ್ ಸ್ಟಂಟ್‌ಗಳನ್ನು ಉಚಿತವಾಗಿ ಅಳವಡಿಸಲಾಗುವುದು. ಈ ಸೌಲಭ್ಯವನ್ನು ಈಗಾಗಲೇ ಆಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟಿರುವ ರೋಗಿಗಳು ಪಡೆಯಬಹುದು.

ಅವಶ್ಯಕತೆ ಇರುವ ರೋಗಿಗಳು ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಕಡಿಮೆ ಆದಾಯ ಪ್ರಮಾಣಪತ್ರ ಹೊಂದಿರಬೇಕು. ಜೂ.8 ರೊಳಗೆ ಬೆಳಗ್ಗೆ 10ರಿಂದ 4 ಗಂಟೆಯವರೆಗೆ ನೋಂದಾಯಿಸಿಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗಾಗಿ ಬೆಂಗಳೂರು ಜಯದೇವ ಆಸ್ಪತ್ರೆ ಮೊ.9480827888 ಅಥವಾ 080-26944874, ಮೈಸೂರು ಜಯದೇವ ಆಸ್ಪತ್ರೆ ಮೊ.8660105492 ಅಥವಾ 0821-2336255, 2336144, ಕಲಬುರಗಿ ಜಯದೇವ ಆಸ್ಪತ್ರೆ ಮೊ.9482114611 ಅಥವಾ 08472-230511 ಸಂಪರ್ಕಿಸಬಹುದು.