ಕಲಬುರಗಿ: ಮಹರ್ಷಿ ವಾಲ್ಮೀಕಿ ಬದುಕು ಮತ್ತು ಚಿಂತನೆ ಜಯಂತಿಗೆ ಸೀಮಿತವಾಗಿದ್ದು ದುರಂತ. ವಾಲ್ಮೀಕಿ ಮಾನವ ಕುಲದ ಏಳಿಗೆಗೆ ಸತ್ಯ ಮಾರ್ಗ ತೋರಿಸಿದ ಚಿಂತಕ ಎಂದು ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು.
ಗುಲ್ಬರ್ಗ ವಿವಿ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿ, ವಾಲ್ಮೀಕಿ ಪ್ರಖರ ಜ್ಞಾನ ಮತ್ತು ವೈಚಾರಿಕ ಚಿಂತನೆಗೆ ಅಧ್ಯಯನ ಪೀಠಗಳು ಸ್ಥಾಪಿಸಿದ್ದು, ಕೊರತೆಗಳಿಂದ ನಿರೀಕ್ಷಿತ ಉz್ದೆÃಶ ಸಾಧ್ಯವಾಗುತ್ತಿಲ್ಲ. ಪೂರ್ಣ ಜ್ಞಾನದ ಸಮಗ್ರ ವಿಶ್ಲೇಷಣೆ ಅವಶ್ಯವಿದೆ ಎಂದರು.
ಬೆಳಗಾವಿ ರಾಣಿ ಚನ್ನಮ್ಮ ವಿವಿ ಪ್ರಾಧ್ಯಾಪಕಿ ಡಾ.ಕವಿತಾ ಕುಸಗಲ್ ಮಾತನಾಡಿ, ರಾಮಾಯಣ ಪೂಜ್ಯ ಗ್ರಂಥವಲ್ಲ. ವೈಚಾರಿಕ ವಿಚಾರಗಳು ಜಾಗತಿಕ ಜ್ಞಾನ ಚಂತನೆ ಮೂಲಕ ಮಾನವೀಯ ಮೌಲ್ಯ ಅರಿಯಬೇಕು. ೨೪ ಸಾವಿರ ಶ್ಲೋಕ ಬರೆದ ವಾಲ್ಮೀಕಿ ಆಧುನಿಕ ಪ್ರಪಂಚದ ನಿರ್ಮಾತೃ ಎಂದರು.
ಮಹರ್ಷಿ ವಾಲ್ಮೀಕಿ ಬುಡಕಟ್ಟು ಅಧ್ಯಯನ ಹಾಗೂ ಸಂಶೋಧನಾ ಪೀಠದ ನಿರ್ದೇಶಕ ಡಾ.ಟಿ.ನಿಂಗಣ್ಣ ಮಾತನಾಡಿದರು. ವಿವಿ ಸಿಂಡಿಕೇಟ್ ಸದಸ್ಯ ಪ್ರೊ.ಗುರು ಶ್ರೀರಾಮುಲು, ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ.ವಿ.ಎಂ.ಜಾಲಿ, ಪ್ರೊ.ಚಂದ್ರಕಾAತ ಕೆಳಮನಿ, ಪ್ರೊ.ಎನ್.ಬಿ.ನಡುವಿನಮನಿ, ಪ್ರೊ.ಹೂವಿನಬಾವಿ ಬಾಬಣ್ಣ, ಪ್ರೊ.ಕೆ.ವಿಜಯಕುಮಾರ, ಶಂಕರಪ್ಪ, ರಮೇಶ ಲಂಡನಕರ್, ಜಿ.ಎಂ.ವಿದ್ಯಾಸಾಗರ, ರಮೇಶ ರಾಠೋಡ, ಗಾಯಕವಾಡ, ಆನಂದ ನಾಯಕ, ಡಾ.ಹನುಮಂತ ಜಂಗೆ, ಡಾ.ಪ್ರಕಾಶ ಕರಿಯಜ್ಜನವರ್ ಇತರರಿದ್ದರು.
ಮೌಲ್ಯಮಾಪನ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ ಸ್ವಾಗತಿಸಿದರು. ಪ್ರೊ.ಬಸವರಾಜ ಸಣ್ಣಕ್ಕಿ ಅತಿಥಿ ಪರಿಚಯಿಸಿದರು. ಪ್ರಕಾಶ ಹದನೂರಕರ್ ವಂದಿಸಿದರು. ಡಾ.ಚಂದ್ರಕಾAತ ಬಿರಾದಾರ ನಿರೂಪಣೆ ಮಾಡಿದರು.