ಕೂಡ್ಲಿಗಿ: ಶಿವಯೋಗಿ ಸಿದ್ದರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿಯನ್ನು ತಾಲೂಕು ಮಟ್ಟದಲ್ಲಿ ನಿಗದಿತ ದಿನದಂದು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಹಸೀಲ್ದಾರ್ ಎಂ.ರೇಣುಕಾ ಸೂಚಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ.14 ರಂದು ಸಿದ್ದರಾಮೇಶ್ವರ, 19 ರಂದು ಮಹಾಯೋಗಿ ವೇಮನ ಹಾಗೂ 21 ರಂದು ಅಂಬಿಗರ ಚೌಡಯ್ಯ ಜಯಂತಿಯನ್ನು ತಾಲೂಕಿನ ಎಲ್ಲ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಆಚರಣೆ ಮಾಡಿ ಮಹನೀಯರ ಕೊಡುಗೆಗಳನ್ನು ತಿಳಿಸಬೇಕು ಎಂದರು.
ಕಳೆದ ಬಾರಿ ಕೆಲ ಗ್ರಾಮಗಳ ಶಾಲೆ ಹಾಗೂ ಗ್ರಾಪಂ ಕಚೇರಿಗಳಲ್ಲಿ ಆಚರಣೆ ಮಾಡಿಲ್ಲ ಎನ್ನುವ ದೂರುಗಳು ಬಂದಿತ್ತು. ಈ ಬಾರಿ ದೂರುಗಳು ಬಂದಲ್ಲಿ ಶಿಸ್ತುಕ್ರಮಕ್ಕಾಗಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದರು.
ಗಂಗಾಮತಸ್ಥ ಸಮಾಜದ ತಾಲೂಕು ಅಧ್ಯಕ್ಷ ಹುಲಿರಾಜ, ಕುಬೇರ, ಇಟಗಿ ಪ್ರಕಾಶ್, ಶ್ರೀನಿವಾಸ್, ಬೊಪ್ಪಲಾಪುರ ವೀರೇಶ್, ಡಿ.ಟಿ.ಹನುಮಂತಪ್ಪ, ಹನುಮಂತಪ್ಪ, ನಾಗರಾಜ ಇತರರಿದ್ದರು.