ಜಿಲ್ಲೆ

ಜಮೀನು ವಿಚಾರದ ಗಲಾಟೆಯಲ್ಲಿ ಓರ್ವ ಮೃತ

ನೊಣವಿನಕೆರೆ: ಹೋಬಳಿಯ ಕರೀಕೆರೆ ಗ್ರಾಮದಲ್ಲಿ ಗುರುವಾರ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಶುರುವಾದ ಅಣ್ಣ ತಮ್ಮಂದಿರ ನಡುವಿನ ಗಲಾಟೆಯಲ್ಲಿ ಓರ್ವ ಮೃತಪಟ್ಟಿದ್ದಾನೆ.ಮಂಜುನಾಥ್​ (28)ಮೃತ. ಕರೀಕೆರೆಯ ಮಂಜುನಾಥ್​ ಅವರ ಜಮೀನಿ ಪಕ್ಕ ತಮ್ಮ ಚಿಕ್ಕಪ್ಪಂದಿರಾದ ಗೋವಿಂದಯ್ಯ ಮತ್ತು ಶೇಖರಪ್ಪ ಅವರ ಜಮೀನಿದ್ದು, ಜುಲೈ 10ರಂದು ಬೆಳಗ್ಗೆ ಗೋವಿಂದಯ್ಯ ಅವರ ಮಗ ಮನು, ಶೇಖರಪ್ಪ ಹೊಲದಲ್ಲಿ ಮಣ್ಣು ತೆಗೆಸುತ್ತಿರುವಾಗ ಮಂಜುನಾಥ್​ ಮತ್ತು ಪತ್ನಿ ಸುಧಾ ಹೋಗಿ ಜಮೀನಿಗೆ ಓಡಾಡಲು ದಾರಿ ಬಿರುವಂತೆ ತಿಳಿಸಿದ್ದಾರೆ. ಈ ವೇಳೆ ಮನು ಮತ್ತು ಶೇಖರಪ್ಪ ಏಕಾಏಕಿ ಮಂಜುನಾಥ್​ ಮೇಲೆ ದಾಳಿ ನಡೆಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜಗಳ ಬಿಡಿಸಲು ಹೋದ ಸುಧಾಳಿಗೂ ಥಳಿಸಿದ್ದಾರೆ. ಅಸ್ವಸ್ಥನಾದ ಮಂಜುನಾಥನನ್ನು ನೊಣವಿನಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆಗಾಗಲೇ ಮಂಜುನಾಥ್​ ಮೃತಪಟ್ಟಿದ್ದಾನೆ. ಶೇಖರಪ್ಪ, ಮನು, ಜೆ.ಸಿ.ಪಿ ಮಾಲೀಕರು ಹಾಗೂ ಇತರರ ವಿರುದ್ಧ ನೊಣವಿನಕೆರೆ ಠಾಣೆಯಲ್ಲಿ ಮಂಜುನಾಥ್​ ಪತ್ನಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪಿಎಸ್​ಐ ಬಸವರಾಜು ಕವಟಗಿ ತನಿಖೆ ತೀವ್ರಗೊಳಿಸಿದ್ದಾರೆ.