ಜಿಲ್ಲೆ

ಜಮೀನಿನ ವಿಚಾರವಾಗಿ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಹೋರಾಟ

Tumakuru

ತುರುವೇಕೆರೆ: ಜಮೀನಿನ ವಿಚಾರವಾಗಿ ಮುನಿಯೂರಿನ ವಸಂತ್‌ಕುವಾರ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸುವಂತೆ ವಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರು ಮಂಗಳವಾರ ತಾಲೂಕು ಕಚೇರಿಯಿಂದ ಪೊಲೀಸ್ ಠಾಣೆ ವರೆಗೂ ಪ್ರತಿಭಟನೆ ನಡೆಸಿದರು.

ಜೆಡಿಎಸ್ ಕಾರ್ಯಕರ್ತ ವಸಂತ್‌ಕುವಾರ್ ಮೇಲೆ ಶಾಸಕರ ಹಿಂಬಾಲಕ ಪುನೀತ್ ವಾರಣಾಂತಿಕ ಹಲ್ಲೆ ನಡೆಸಿದ್ದಾನೆ, ಹಲ್ಲೆ ನಡೆದು 24 ಗಂಟೆ ಕಳೆದರೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಮೌನವಾಗಿದ್ದಾರೆ, ಅವರ ಮೇಲೆ ಶಾಸಕರ ಒತ್ತಡವಿದೆಯೇ ಎಂಬ ಅನುಮಾನ ಮೂಡಿದೆ ಎಂದು ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.

ಪೊಲೀಸರು ಶಾಸಕರ ಕೈ ಗೊಂಬೆಯಂತೆ ಕೆಲಸ ವಾಡುತ್ತಿದ್ದಾರೆ. ಆರೋಪಿಯನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು ಎಂದು ಮುಖಂಡ ದೊಡ್ಡಟ್ಟ ಚಂದ್ರೇಶ್ ಆಗ್ರಹಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಸ್ವಾಮಿ, ಮುಖಂಡರಾದ ಬಾಣಸಂದ್ರ

ರಮೇಶ್, ಕೊಳಾಲ ಗಂಗಾಧರ್, ವಿಜಯ್‌ಕುವಾರ್, ಎನ್.ಆರ್.ಸುರೇಶ್, ದಂಡಿನಶಿವರ ಕುವಾರ್, ಶ್ರೀಕಾಂತ್, ಕುರುಬರ ಸಂದ

ಸದಸ್ಯರಾದ ನಾಗೇಶ್, ರೇವಣ್ಣ, ಪರಶುರಾಮ್, ಹಲ್ಲೆಗೊಳಗಾದ ವ್ಯಕ್ತಿಯ ತಾಯಿ ಲಕ್ಷ್ಮಮ್ಮ,

ಮಮತಾ ಇದ್ದರು.