ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನಾಗರತ್ನ ಅವರಿಗೆ ಮನವಿ ಸಲ್ಲಿಸಿದ ದಂಟರಮಕ್ಕಿ ನಿವಾಸಿಗಳು ವಸತಿ ಉz್ದÉÃಶದಿಂದ ಜಮೀನುಗಳನ್ನು ಹಸಿರು ಮತ್ತು ಕೆಂಪು ವಲಯದಿಂದ ಹಳದಿ ವಲಯಕ್ಕೆ ಬದಲಾವಣೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. 
ಜಿಲ್ಲೆ

ಜಮೀನನ್ನು ಹಳದಿ ವಲಯಕ್ಕೆ ಬದಲಾಯಿಸಲು ಆಯುಕ್ತರಿಗೆ ಮನವಿ

ಚಿಕ್ಕಮಗಳೂರು: ವಸತಿ ಉz್ದೆÃಶದಿಂದ ಜಮೀನುಗಳನ್ನು ಹಸಿರು ಮತ್ತು ಕೆಂಪು ವಲಯದಿಂದ ಹಳದಿ ವಲಯಕ್ಕೆ ಬದಲಾವಣೆ ಮಾಡಿಕೊಡಬೇಕು ಎಂದು ದಂಟರಮಕ್ಕಿ ಗ್ರಾಮಸ್ಥರು ಸೋಮವಾರ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತೆ ನಾಗರತ್ನ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಗ್ರಾಮಸ್ಥ ಧರ್ಮರಾಜು, ಕಸಬಾ ಹೋಬಳಿಯ ದಂಟರಮಕ್ಕಿ ಗ್ರಾಮದ ಜಮೀನುಗಳು ಈಗಾಗಲೇ ನಗರದ ಹೃದಯ ಭಾಗಕ್ಕೆ ಹೊಂದಿಕೊAಡಿವೆ. ಸುತ್ತಮುತ್ತಲಿನ ಜಮೀನುಗಳು ಪ್ರಸ್ತುತ ಅಭಿವೃದ್ಧಿಗೊಂಡಿದ್ದು, ಸಣ್ಣ ಜಮೀನಿನ ಗ್ರಾಮಸ್ಥರು ಹಿಡುವಳಿದಾರರಾಗಿದ್ದಾರೆ ಎಂದರು.

ಹಿಂದೆ ನಗರದ ದೀಪಾ ನರ್ಸಿಂಗ್ ಹೋಂನ ೬೦ ಅಡಿ ರಸ್ತೆ, ದಂಟರಮಕ್ಕಿಗೆ ಸಂಪರ್ಕಿಸುವ ೪೦ ಅಡಿ ರಸ್ತೆ, ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣಕ್ಕೆ ಹೊಂದಿಕೊAಡ ೮೦ ಅಡಿ ರಸ್ತೆಗಳನ್ನು ಈಗಾಗಲೇ ಗ್ರಾಮಸ್ಥರು ಯಾವುದೇ ಸರ್ಕಾರದ ಅನುದಾನ ಪಡೆಯದೇ ಅಭಿವೃದ್ದಿ ದೃಷ್ಟಿಯಿಂದ ಜಮೀನಿನ ಜಾಗವನ್ನು ಬಿಡಲಾಗಿದೆ ಎಂದು ತಿಳಿಸಿದರು.

ಹೀಗಾಗಿ ಆಯುಕ್ತರು ಅಭಿವೃದ್ದಿಪಡಿಸಿರುವ ಜಿಲ್ಲಾ ನಕಾಶೆಯಲ್ಲಿ ಗ್ರಾಮಸ್ಥರ ಜಮೀನುಗಳನ್ನು ಯಾವುದೇ ರೀತಿ ತಿಳುವಳಿಕೆಯ ಮಾಹಿತಿಗಳನ್ನು ನೀಡದೇ ಏಕಾಏಕಿ ಹಸಿರು, ಕೆಂಪು ವಲಯ, ರಸ್ತೆಗಳು ಹಾಗೂ ಉದ್ಯಾನವನಗಳಿಗೆ ಮೀಸಲಾಗಿ ಜಮೀನುಗಳನ್ನು ಕಾಯ್ದಿರಿಸಿದ ಕಾರಣ ಸಣ್ಣ ಹಿಡುವಳಿದಾರರಿಗೆ ತೀವ್ರ ತೊಂದರೆಯಾಗಿದೆ ಎಂದರು.

ಸಣ್ಣ ಜಮೀನು ಹೊಂದಿರುವ ಗ್ರಾಮಸ್ಥರಿಗೆ ವಸತಿಗಳನ್ನು ನಿರ್ಮಿಸಲು ಉದೇಶದಿಂದ ಆಯುಕ್ತರು ಜಮೀನನ್ನು ಹಸಿರು ಮತ್ತು ಕೆಂಪು ವಲಯದಿಂದ ಹಳದಿ ವಲಯಕ್ಕೆ ಬದಲಾಯಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಂದ್ರಶೇಖರ್, ಧರ್ಮರಾಜು, ಮಹೇಶ್, ಬೀರೇಗೌಡ, ದೊಡ್ಡ ರಂಗೇಗೌಡ, ಜಗದೀಶ್, ಡಿ.ಡಿ.ಸ್ವಾಮಿ, ಸೋಮೇಗೌಡ, ಡಿ.ಕೆ.ಮಹೇಶ್, ಕುಮಾರ್, ಚಂದ್ರೇಗೌಡ, ಮಂಜು ನಾಥ್, ಶೇಷೇಗೌಡ, ಡಿ.ಟಿ.ಜಗದೀಶ್, ದಂಟರಮಕ್ಕಿ ರವಿ ಮತ್ತಿತರರಿದ್ದರು.