ಜಿಲ್ಲೆ

ಜಮೀನನ್ನು ಗುತ್ತಿಗೆ ಆಧಾರದಲ್ಲಿ ಕಾಫೀ ಬೆಳಗಾರರಿಗೆ ನೀಡಲು ಸರ್ಕಾರ ಆದೇಶ:ಎಚ್. ಟಿ ಮೋಹನ್

ಹಾಸನ: ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ ಸಾಗುವಳಿ ಮಾಡಿಕೊಂಡು ಬಂದಿದ್ದ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಕಾಫೀ ಬೆಳಗಾರರಿಗೆ ನೀಡಲು ಈಗಾಗಲೇ ರಾಜ್ಯ ಸರ್ಕಾರ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು ಅವರಿಗೆ ಈ ಮೂಲಕ ಧನ್ಯವಾದ ತಿಳಿಸುವುದಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್. ಟಿ ಮೋಹನ್ ಹೇಳಿದರು.
ಈ ಹಿಂದೆ ಬೆಳೆಗಾರರು ಒತ್ತುವರಿ ಮಾಡಿದ್ದ ಸರ್ಕಾರಿ ಜಮೀನನ್ನು ಸಾಗುವಳಿ ದಾರರಿಗೆ ನೀಡಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿ.ಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಪ್ಪಿಗೆ ಸೂಚಿಸಿದ್ದು ಈಗಾಗಲೇ ಸಂಭಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಾಸನ, ಚಿಕ್ಕಮಂಗಳೂರು, ಕೊಡಗು ಜಿಲ್ಲೆಯ ಕಾಫೀ ಬೇಳೆಗಾರರಿಗೆ ಇದರಿಂದ ಅನುಕೂಲ ಆಗಲಿದ್ದು ಒಂದು 2005 ರಿಂದ ಹಿಂದೆ ಒತ್ತುವರಿ ಮಾಡಿದ್ದ ಒಂದು ಕುಟುಂಬಕ್ಕೆ 25 ಎಕರೆ ಜಮೀನನ್ನು ಗುತ್ತಿಗೆ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.
ಒತ್ತುವರಿ ಮಾಡಿರುವ ಒಂದು ಎಕರೆ ಜಮೀನಿಗೆ ವಾರ್ಷಿಕ 1 ಸಾವಿರ, 1 ರಿಂದ 5 ಎಕರೆ ವರೆಗೆ 1,500 ರೂಪಾಯಿ, 10 ರಿಂದ 15 ಎಕರೆ ವರೆಗೆ 2,500 ರೂಪಾಯಿ, 20 ರಿಂದ 25 ಎಕರೆ ವರೆಗೆ 3,500 ರೂಪಾಯಿ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು ಇದಕ್ಕೆ ಸಹಕಾರ ನೀಡಿದ ಸ್ಥಳೀಯ ಜನ ಪ್ರತಿನಿಧಿಗಳು, ಹಾಗೂ ರಾಜ್ಯ ಸರ್ಕಾರಕ್ಕೆ ಬೆಳೆಗಾರರ ಒಕ್ಕೂಟ ದ ವತಿಯಿಂದ ಧನ್ಯವಾದ ತಿಳಿಸುವುದಾಗಿ ಹೇಳಿದರು
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರದಾನ ಕಾರ್ಯದರ್ಶಿ, ಕೃಷ್ಣಪ್ಪ, ಯತೀಶ್, ಪರಮೇಶ್ ಇತರರು ಇದ್ದರು