ಕಾಳಗಿ ತಾಲೂಕಿನ ಕೋಡ್ಲಿಯಲ್ಲಿ ಉದ್ಯಮಿ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡ ಮಲ್ಲಿನಾಥ ಕೋಲಕುಂದಿ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಚೇರ್ ವಿತರಿಸಲಾಯಿತು. ಶ್ರೀ ಬಸವಲಿಂಗ ಶಿವಾಚಾರ್ಯರು, ಗೀತಾ ಪ್ರೇಮಕುಮಾರ, ಜೈಶಂಕರ ಕೋಲಕುಂದಿ, ವಿಜಯಕುಮಾರ ರಾಠೋಡ್ ಇದ್ದರು. 
ಜಿಲ್ಲೆ

ಜನ್ಮದಿನ ಬಡವರ ಬಾಳಿಗೆ ಬೆಳಕಾಗಲಿ

ಕಾಳಗಿ: ಇಂದಿನ ಆಧುನಿಕ ದಿನಗಳಲ್ಲಿ ಅತ್ಯಧಿಕ ದುಂದುವೆಚ್ಚ ಮಾಡಿ ಚಿತ್ರ- ವಿಚಿತ್ರವಾಗಿ ಜನ್ಮದಿನ ಆಚರಿಸಿಕೊಳ್ಳುವುದು ಟ್ರೆಂಡ್ ಆಗಿದೆ. ಆದರೆ ನಮ್ ಬರ್ತ್‍ಡೇಗಳು ಬಡವರ ಬಾಳಿಗೆ ಬೆಳಕಾಗುವಂತಿರಬೇಕು ಎಂದು ಕೋಡ್ಲಿಯ ಶ್ರೀ ಬಸವಲಿಂಗ ಶಿವಾಚಾರ್ಯರು ನುಡಿದರು.
ಕೋಡ್ಲಿಯ ಕಂಠೆಪ್ಪ ಮಾಸ್ಟರ್ ರಂಗಮಂದಿರದಲ್ಲಿ ಉದ್ಯಮಿ, ವೀರಶೈವ ಲಿಂಗಾಯತ ಸಮಾಜದ ಮುಖಂಡ ಮಲ್ಲಿನಾಥ ಕೋಲಕುಂದಿ ಅವರ 49ನೇ ಜನ್ಮದಿನದ ನಿಮಿತ್ತ ಕೋಲಕುಂದಿ ಅಭಿಮಾನಿ ಬಳಗದಿಂದ ಸೋಮವಾರ ಹಮ್ಮಿಕೊಂಡಿದ್ದ ಅನ್ನ ಸಂತರ್ಪಣೆ, ಬಡವರಿಗೆ ಬಟ್ಟೆ ವಿತರಣೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಎಲ್‍ಕೆಜಿ, ಯುಕೆಜಿ ಮಕ್ಕಳಿಗೆ ಕುರ್ಚಿ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜನ್ಮದಿನ ಹೆಸರಿನಲ್ಲಿ ಪಾರ್ಟಿ ಮಾಡಿ, ಕುಡಿದು ತೂರಾಡುವ ಸಂಸ್ಕøತಿ ನಮ್ಮದಲ್ಲ. ಶ್ರೇಷ್ಠ ಸಂಸ್ಕಾರ ನಮ್ಮದಾಗಿದ್ದು, ಜನ್ಮದಿನಗಳನ್ನು ಒಂದಿಷ್ಟು ಜನರಿಗೆ ನೆರವಾಗುವ ಕೆಲಸ ಮಾಡೋಣ. ಇಂದು ಹಮ್ಮಿಕೊಂಡಿದ ಬರ್ತ್‍ಡೇ ಕಾರ್ಯಕ್ರಮದಲ್ಲಿ ಜನಪರ ಕಾರ್ಯ ನಡೆಸಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಮುಖಂಡರಾದ ಶರಣು ಸಾಲಿಮಠ ಮೋಘಾ, ಮಲ್ಲಿನಾಥ ಪಾಟೀಲ್ ಕಾಳಗಿ, ವಿಜಯಕುಮಾರ ರಾಠೋಡ್ ಶಾದಿಪುರ, ವಿಜಯಕುಮಾರ ಚೆಂಗಟಾ, ಚಂದಪ್ಪ ಮೋಘಾ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಗೀತಾ ಪ್ರೇಮಕುಮಾರ ಅಧ್ಯP್ಷÀತೆ ವಹಿಸಿದ್ದರು. ಪ್ರಮುಖರಾದ ಜೈ ಶಂಕರ ಕೋಲಕುಂದಿ, ವೈಜನಾಥರೆಡ್ಡಿ ದೇಶಮುಖ, ಶ್ರೀಕಾಂತ ತಾಂಡೂರ, ಅಮೃತ ರೆಡ್ಡಿ ದೇಶಮುಖ, ನಾಗರಾಜ ಚಿಕ್ಕಮಠ, ವಿಜಯಕುಮಾರ ತುಪ್ಪದ ತೆಂಗಳಿ, ಕಾಳಶೆಟ್ಟಿ ಪಡಶೆಟ್ಟಿ, ಬಾನುಬೇಗಂ, ಮಾರುತಿ ಜಮಾದಾರ, ರಾಜು ಸಿಳ್ಳಿನ್, ಗಂಗಾಧರ ಕುಂಬಾರ, ಸಂಜೀವರೆಡ್ಡಿ ದೇಶಮುಖ, ಸಾಗರ ಪಾಟೀಲ್, ಸಿದ್ದು ಸೀಗಿ, ಜಗದೀಶ ಮಾಲಿಪಾಟೀಲ್, ಸೂರ್ಯಕಾಂತ ಹಲಚೇರಿ, ಜಗನ್ನಾಥ ಮಗಿ, ಬಸವರಾಜ ತುಪ್ಪದ, ಉಮೇಶ ಯಲ್ಮಡಗಿ, ಬಸವರಾಜ ಕರಕಮುಕಲಿ, ಸಿದ್ದು ಬುಬಲಿ, ಶರಣಪ್ಪ ಪೆದ್ದಿ, ಶರಣು ಸಕ್ರಿ, ಅಮರ ತಾಂಡೂರ, ಉಮೇಶ ಗುತ್ತೇದಾರ್, ಪ್ರದೀಪ ತಾಂಡೂರ, ರಾಜು ವಜ್ಜರಗಿ ಇತರರಿದ್ದರು.

ಅಭಿಮಾನಿ ಬಳಗದ ಅಧ್ಯP್ಷÀ ಸಂಗಮೇಶ ತಾಂಡೂರ ಸ್ವಾಗತಿಸಿದರು. ಶಿವು ಸುಲೇಪೇಠ ನಿರೂಪಣೆ ಮಾಡಿ ವಂದಿಸಿದರು.