ಬೀದರ್: ಲಂಡನ್ ಕೋವೆಂಟ್ರಿ ವಿವಿಯಿಂದ ಪಾರ್ಲಿಮೆಂಟರ್ ಗೌರವಕ್ಕೆ ಭಾಜನರಾದ ಇಲ್ಲಿನ ಯುವ ಮುಖಂಡ ಆದೀಶ್ ರಜನೀಶ್ ವಾಲಿ ಅವರ ಜನ್ಮ ದಿನ ನಿಮಿತ್ತ ಭಾನುವಾರ ನಗರದಲ್ಲಿ ಅಭಿಮಾನಿಗಳಿಂದ ರಕ್ತದಾನ ಶಿಬಿರ, ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಅನ್ನ ದಾಸೋಹ, ಬಡವರಿಗೆ ಆಹಾರ ಧಾನ್ಯ ಇತರೆ ಸಾಮಾಜಿಕ ಚಟುವಟಿಕೆಗಳು ನಡೆದವು.
ನಗರದ ವಾಲಿಶ್ರೀ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಹಲವು ಯುವಕರು ಸ್ವಯಂ ಇಚ್ಛೆಯಿಂದ ಪಾಲ್ಗೊಂಡು ರಕ್ತದಾನ ಮಾಡಿದರು. ಆದೀಶ್ ವಾಲಿ ಶಿಬಿರ ಉದ್ಘಾಟಿಸಿದರು. ಡಾ. ರಾಜಶೇಖರ ಸೇಡಂಕರ್, ಡಾ. ವಿ.ವಿ. ನಾಗರಾಜ, ಡಾ.ಲಿಂಗರಾಜ, ಡಾ. ಖಾಜಾ ಮೈನೊದ್ದಿನ್ ಇತರರಿದ್ದರು.
ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿರುವ ವಾಲಿ ಅತಿಥಿಗೃಹದಲ್ಲಿ ಮುಗಳಖೋಡ-ಜಿಡಗಾ ಮಠದ ಪೂಜ್ಯ ಡಾ. ಮುರುಘರಾಜೇಂದ್ರ ಸ್ವಾಮೀಜಿ ಅವರು ಆದೀಶ್ ವಾಲಿ ಅವರಿಗೆ ಆಶೀರ್ವದಿಸಿದರು. ಸಣ್ಣ ವಯಸ್ಸಿನಲ್ಲಿ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿರುವುದು ಮಾದರಿಯಾಗಿದೆ ಎಂದು ಬಣ್ಣಿಸಿದರು.ಡಾ. ರಜನೀಶ್ ವಾಲಿ ಇತರರಿದ್ದರು.