ನಾರಾಯಣಪುರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬುಧವಾರ ನೂಲಹುಣ್ಣಿಮೆ ನಿಮಿತ್ತ ಯಜ್ಞೋಪವೀತ ಧಾರಣೆ ನಡೆಯಿತು. ಶ್ರೀ ಗಿರೀಶಾಚಾರ್ಯ, ಶ್ರೀ ರಾಘವೇಂದ್ರಾಚಾರ್ಯ ಜೋಶಿ, ಗೋಪಾಲಾಚಾರ್ಯ ಕಾಚಾಪುರ, ಡಾ.ಸುರೇಶ ಇತರರಿದ್ದರು. 
ಜಿಲ್ಲೆ

ಜನಿವಾರ ಧಾರಣೆ ಒಳ್ಳೆಯ ಸಂಸ್ಕಾರ

ಕೊಡೇಕಲ್: ಜನಿವಾರ ಧಾರಣೆ ಮಹತ್ವದ ಸಂಸ್ಕಾರವಾಗಿದೆ ಎಂದು ತಾಳಿಕೋಟಿಯ ಶ್ರೀ ಗಿರೀಶಾಚಾರ್ಯ ಹೇಳಿದರು.

ನಾರಾಯಣಪುರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನೂಲಹುಣ್ಣಿಮೆ ನಿಮಿತ್ತ ಋಗ್ವೇದಿ ಹಾಗೂ ಯಜುರ್ವೇದಿಗಳಿಗೆ ಶ್ರಾವಣಿ(ಜನಿವಾರ) ಧಾರಣೆ ಕುರಿತು ಬುಧವಾರ ಏರ್ಪಡಿಸಿದ್ದ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ಜನಿವಾರ ಧಾರಣೆ ಮೂಲಕ ಹೊಸ ಅಧ್ಯಾಯ ಆರಂಭಿಸಲಾಗುತ್ತದೆ. ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ೫ ಗಂಟುಗಳಿಂದ ಕೂಡಿದ್ದು, ಬ್ರಹ್ಮಜ್ಞಾನ, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದ ಪ್ರತೀಕ ಎಂದರು.

ಅರ್ಚಕ ರಾಘವೇಂದ್ರಾಚಾರ್ಯ ಜೋಶಿ, ಗೋಪಾಲಾಚಾರ್ಯ ಕಾಚಾಪುರ, ಡಾ.ಸುರೇಶ ಆದೋನಿ, ನರಸಿಂಹಾಚಾರ್ಯ ಕೊಳ್ಳಿ, ಸದಾಶಿವರಾಮ, ದತ್ತಾತ್ರೇಯ ಕುಲಕರ್ಣಿ ಇತರರಿದ್ದರು. ಮಠದಲ್ಲಿ ಬೆಳಗ್ಗೆ ಸಂಕಲ್ಪ, ಹೋಮ-ಹವನ, ವೇದಮಂತ್ರ ಘೋಷಣೆಯೊಂದಿಗೆ ಯಜ್ಞೋಪವೀತ ಧಾರಣೆ ಅಲ್ಲದೆ ಯತಿದ್ವಯರ ವೃಂದಾವನಗಳಿಗೆ ಹಸ್ತೋದಕ, ನೈವೇದ್ಯ ಮಹಾಮಂಗಳಾರತಿ ನೆರವೇರಿತು.