ಬೀದರ್: ಮೆಡಿಕಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಜನಾರೋಗ್ಯದ ಹಿತದಿಂದ ಬದಲಾವಣೆಗೆ ತಕ್ಕಂತೆ ಕೆಲಸ ಮಾಡಬೇಕೆಂದು ಸಹಾಯಕ ಔಷಧ ನಿಯಂತ್ರಕ ಬಸವರಾಜ ಅಸಂಗಿ ಹೇಳಿದರು.
ನಗರದಲ್ಲಿ ಜಿಲ್ಲಾ ಔಷಧ ಮತ್ತು ವಿತರಕರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ ನಿರಂತರ ಕಲಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಯಮದಂತೆ ಮೆಡಿಕಲ್ ಸ್ಟೋರ್ ಗಳು ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಆರೋಗ್ಯ ಅಭಿವೃದ್ಧಿಯಲ್ಲಿ ವೈದ್ಯರ ಜತೆಯಲ್ಲಿ ಮೆಡಿಕಲ್ ಸ್ಟೋರ್‌ಗಳ ಪಾತ್ರ ಅಪಾರ ಎಂದು ಹೇಳಿದರು.
ಸಹಾಯಕ ಔಷಧ ನಿಯಂತ್ರಕ ಶರಣಬಸಪ್ಪ ಹನಮನಾಳ, ಕರ್ನಾಟಕ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕ ಡಾ. ಕ್ರಾಂತಿಕುಮಾರ ಸಿರ್ಸಿ, ಡಾ.ವೀರೇಂದ್ರ ಶಾಸ್ತ್ರಿ ಮಾತನಾಡಿದರು. ಔಷಧ ಮತ್ತು ವಿತರಕರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷರಾದ ಪ್ರಭುರಾಜ ಚಿಂಚೋಳಿ, ಇರ್ಫಾನ್ ಅಹ್ಮದ್, ಕಾರ್ಯದರ್ಶಿ ಪ್ರಮೋದ ಮೋಟೆದಾರ, ಜಂಟಿ ಕಾರ್ಯದರ್ಶಿ ಬಸವರಾಜ ಮಡಕಿ, ಖಜಾಂಚಿ ರಾಮಚಂದ್ರ ಸಫಾರೆ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಗಾದಗಿ, ಪ್ರಭಾಕರ ಮೈಲಾಪುರೆ, ಮಹ್ಮದ್ ಸುಲ್ತಾನ್, ಎಂ.ಎ.ಸಮಿ ಇತರರಿದ್ದರು. ಸತೀಶ ಮೈಲಾಪುರೆ ಸ್ವಾಗತಿಸಿ, ನಿರೂಪಣೆ ಮಾಡಿದರು. ರೋಹಿತ್ ಮೈಲಾಪುರ ವಂದಿಸಿದರು.