ಜಿಲ್ಲೆ

ಜನಾಭಿವೃದ್ಧಿಯೇ ಅರಿಹಂತ ಧ್ಯೇಯ

ಬೋರಗಾಂವ: ಅರಿಹಂತ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ದಿವಂಗತ ರಾವಸಾಹೇಬ ಪಾಟೀಲ ಸಹಕಾರ, ಧಾರ್ಮಿಕ, ಸಾಮಾಜಿಕ, ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಇತರ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿ ಜನಪರ ಕಾರ್ಯಗಳಿಗೆ ಮಾದರಿಯಾಗಿದ್ದರು. ರೈತ ಸದಸ್ಯರು ಹಾಗೂ ಜನರ ಅಭಿವೃದ್ಧಿಯೇ ಸಂಸ್ಥೆ ಧ್ಯೇಯ ಎಂದು ಶ್ರೀ ಅರಿಹಂತ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಚೇರ್ಮನ್ ಅಭಿನಂದನ ಪಾಟೀಲ ಹೇಳಿದರು.

ಪಟ್ಟಣದ ಅರಿಹಂತ ಸಭಾಗೃಹದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅರಿಹಂತ ಕ್ರೆಡಿಟ್ ಸೊಸೈಟಿ ೩೫ನೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಅರಿಹಂತ ೧೭,೯೪೬ ಸದಸ್ಯರು, ೬.೩೬ ಕೋಟಿ ರೂ. ಷೇರು ಬಂಡವಾಳ, ೯೪.೯೧ ಕೋಟಿ ರೂ. ನಿಧಿ, ೧,೪೫೮.೦೭ ಕೋಟಿ ರೂ. ಠೇವಣಿ ಹೊಂದಿದ್ದು, ೨೩.೫೫ ಕೋಟಿ ರೂ. ಹೂಡಿಕೆ ಮಾಡಿದೆ. ೧,೦೯೮.೨೯ ಕೋಟಿ ರೂ. ಸಾಲ ವಿತರಿಸಿ, ೧೪.೭೬ ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದರು.

ಸಹಕಾರ ಮುಖಂಡ ಉತ್ತಮ ಪಾಟೀಲ ಮಾತನಾಡಿ, ಅರಿಹಂತ ಸಂಸ್ಥೆಯು ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿ ವಿವಿಧೆಡೆ ಶಾಖೆ ವಿಸ್ತರಿಸಿ ಸಾಮಾನ್ಯ ಸದಸ್ಯರು ಮತ್ತು ರೈತರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಹಾಯ ಮಾಡುವ ಮೂಲಕ ಆರ್ಥಿಕ ಪ್ರಗತಿ ಸಾಧಿಸುತ್ತಿದೆ. ಅರಿಹಂತ ಆಸ್ಪತ್ರೆ ವಿಸ್ತರಿಸಲಾಗುವುದು. ಅರಿಹಂತ ಶಿಕ್ಷಣ ಸಂಸ್ಥೆ, ನೂಲಿನ ಗಿರಣಿ, ಹಾಲಿನ ಡೈರಿ, ಪ್ರಾಥಮಿಕ ಕೃಷಿ ಸಂಘದ ಮೂಲಕ ಸೇವೆ ನೀಡುತ್ತಿದ್ದೇವೆ. ಸಹಕಾರಿಯಿಂದ ಶೀಘ್ರದಲ್ಲೇ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ೧೦ ಶಾಖೆ ತೆರೆಯಲಾಗುವುದು ಎಂದರು.

ಮಾಜಿ ಸಚಿವ ವೀರಕುಮಾರ ಪಾಟೀಲ, ಬಾಳಾಸಾಹೇಬ ಪಾಟೀಲ, ದಿಲೀಪ ಪಠಡೆ, ಸಿದ್ಧಪ್ಪ ನಾಗನೂರ, ಸತೀಶ ಪಾಟೀಲ ಮಾತನಾಡಿದರು. ಮಾಜಿ ಶಾಸಕ ಸುಭಾಷ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷರ ಭಾವಚಿತ್ರಕ್ಕೆ ಗಣ್ಯರು ಗೌರವ ಸಲ್ಲಿಸಿದರು. ಸಿಇಒ ಅಶೋಕಬಂಕಾಪುರೆ ಲಾಭ-ಹಾನಿ ಪತ್ರ ಓದಿ ಅನುಮೋದನೆ ಪಡೆದರು. ಜಯಸಿಂಗಪುರ ಅತ್ಯುತ್ತಮ ಶಾಖೆಯಾಗಿ, ಬಾಳಾಸಾಹೇಬ ಚೌಗುಲೆ ಅತ್ಯುತ್ತಮ ವ್ಯವಸ್ಥಾಪಕರಾಗಿ ಮತ್ತು ಶರದ ಸಾತಪುತೆ ಅತ್ಯುತ್ತಮ ಸೇವಕರೆಂದು ಗೌರವಿಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಸವಾಡೆ, ಪಂಕಜ ಪಾಟೀಲ, ಸುಜಯ ಪಾಟೀಲ, ನಿಕು ಪಾಟೀಲ, ಇಂದ್ರಜಿತ ಪಾಟೀಲ, ಬಾಳಾಸಾಹೇಬ ಪಾಟೀಲ, ಸಂಜಯ ದೇಸಾಯಿ, ಅಪ್ಪಾಸಾಹೇಬ ಪಾಟೀಲ, ಅರುಣ ನಿಕಾಡೆ, ಆನಂದ ಗಿಂಡೆ, ದಿಲೀಪ ಪಠಾಡೆ, ಸುದರ್ಶನ ಖೋತ, ಸೊಸೈಟಿ ಉಪಾಧ್ಯಕ್ಷ ಸತೀಶ ಪಾಟೀಲ, ಸಂತೋಷ ಹಂಚನಾಳೆ, ಅಭಯಕುಮಾರ ಮಗದುಮ್ ಇತರರಿದ್ದರು.