ಚಿಕ್ಕಮಗಳೂರು ಹೊರವಲಯದ ತೇಗೂರು ಸಮೀಪದ ಅರಸು ಸಮುದಾಯ ಭವನದಲ್ಲಿ ಜಿಲ್ಲಾ ಅರಸು ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಕೆ.ಜೆ.ಮಂಜುನಾಥ್‌ರಾಜ್ ಅರಸ್, ಮಧುಕುಮಾರ್ ರಾಜ್ ಅರಸ್, ಮೊಹನ್ ರಾಜ್ ಅರಸ್, ವನರಾಜ್ ಅರಸ್, ಆನಂದರಾಜ್ ಅರಸ್ ಮತ್ತಿತರರಿದ್ದರು.  
ಜಿಲ್ಲೆ

ಜನಾಂಗದ ಅಭಿವೃಧ್ದಿ ನಿಸ್ವಾರ್ಥದಿಂದ ಸೇವೆಗೆ ಬದ್ಧ

ಚಿಕ್ಕಮಗಳೂರು: ಅರಸು ಜನಾಂಗದ ಏಳಿಗೆಗೆ ಹಾಗೂ ಸಮುದಾಯ ಭವನ ದೀರ್ಘ ಕಾಲದ ಅಭಿವೃಧ್ದಿಗೆ ಪ್ರಾಮಾಣಿಕ ಹಾಗೂ ನಿಸ್ವಾರ್ಥದಿಂದ ಕರ್ತವ್ಯ ನಿರ್ವಹಿಸಿ ಜನಾಂಗದ ಒಳಿತಿಗಾಗಿ ದುಡಿಯುತ್ತೇನೆ ಎಂದು ಜಿಲ್ಲಾ ಅರಸು ಸಂಘದ ಅಧ್ಯಕ್ಷ ಕೆ.ಜೆ.ಮಂಜುನಾಥ್‌ರಾಜ್ ಅರಸ್ ತಿಳಿಸಿದರು.

ನಗರದ ತೇಗೂರು ಸಮೀಪದ ಅರಸು ಸಮುದಾಯ ಭವನದಲ್ಲಿ ಜಿಲ್ಲಾ ಅರಸು ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದ ಅವರು, ಸಂಘ ಸ್ಥಾಪನೆಯ ಆರಂಭದಲ್ಲಿ ಹಿರಿಯರು ಜನಾಂಗದ ಪ್ರತಿ ಮನೆಗಳಿಗೆ ತೆರಳಿ ಪೈಸೆ ಪೈಸೆ ಸಂಗ್ರಹಿಸಿ ಸಂಘದ ಬೆಳವಣಿಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಭವನದ ಅಭಿವೃಧ್ದಿಗೆ ಜನಪ್ರತಿನಿಧಿಗಳು, ಸರ್ಕಾರವು ಸ್ಪಂದಿಸಿ ಅರಸು ಕುಟುಂಬಕ್ಕೆ ಅನುಕೂಲ ಕಲ್ಪಿಸಿಕೊಟ್ಟಿದೆ ಎಂದು ಸ್ಮರಿಸಿದರು.

ಪ್ರಸ್ತುತ ಅರಸು ಸಂಘ ಹಲವಾರು ಹಿರಿಯರ ಶ್ರಮದಿಂದ ಸ್ಥಾಪನೆಗೊಂಡÀÄ ಮೂರು ದಶಕಗಳು ಕಳೆಯುತ್ತಿದೆ. ಹಿಂದಿನ ಅವಧಿಯಲ್ಲಿ ಸಮುದಾಯ ಭವನ ನಿರ್ಮಿಸಿ ಅರಸರಿಗೆ ಆರ್ಥಿಕ ವೆಚ್ಚವನ್ನು ಕಡಿಮೆಗೊಳಿಸಿದ್ದು, ಮುಂದೆ ತಾವು ಕೂಡಾ ಶ್ರೇಯೋಭಿವೃಧ್ದಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಹಿಂದಿನ ಅಧ್ಯಕ್ಷರ ಅಲ್ಪಾವಧಿಯಲ್ಲಿ ನಗರ ಸಮೀಪ ಭವನ ನಿರ್ಮಿಸಲಾಗಿದೆ. ಮುಂದೆ ಭವನದ ಆವರಣದಲ್ಲಿ ದೇವಾಲಯ ಸೇರಿದಂತೆ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಜನಾಂಗ ಹಾಗೂ ಸಾರ್ವಜನಿಕರಿಗೆ ಶುಭಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಮಧುಕುಮಾರ್ ಅರಸ್, ತಮ್ಮ ಅವಧಿಯಲ್ಲಿ ಸತ್ಯ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿz್ದೆÃನೆ. ಆದರೆ ಕೆಲವರು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡು ತೇಜೋವಧೆಗೆ ಮುಂದಾಗಿದ್ದರು. ಇದಕ್ಕೆ ತಕ್ಕ ಉತ್ತರವನ್ನು ಲೆಕ್ಕಾಚಾರದ ಮೂಲಕ ಬಹಿರಂಗವಾಗಿ ನೀಡಿz್ದÉÃನೆ ಎಂದರು.

ನೂತನವಾಗಿ ಅರಸು ಸಂಘದ ಪದಾಧಿಕಾರಿಗಳು ಸಮುದಾಯ ಆಸ್ತಿಯನ್ನು ಅಭಿವೃದ್ದಿಗೊಳಿಸದಿದ್ದರೂ ಪರವಾಗಿಲ್ಲ. ಉಳಿಸಿರುವುದನ್ನು ಕಳೆಯಬಾರದು. ಅವಕಾಶ ದೊರೆತಲ್ಲಿ ತಾವು ಕೂಡಾ ಸಮುದಾಯ ಏಳಿಗೆಗೆ ಶ್ರಮಿಸಿ ಇನ್ನಷ್ಟು ಜನಾಂಗದ ಅಭಿವೃದ್ದಿಗೆ ದುಡಿಯುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅರಸು ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್‌ರಾಜ್ ಅರಸ್, ಉಪಾಧ್ಯಕ್ಷರಾದ ಕೆ.ಆರ್.ಮೋಹನ್‌ರಾಜ್ ಅರಸ್, ವನರಾಜ್ ಅರಸ್, ಟಿ.ಕೆ.ಮಂಜುನಾಥ್ ರಾಜ್ ಅರಸ್ ಖಜಾಂಚಿ ಲೋಕನಾಥ ರಾಜ್ ಅರಸ್, ಸಹ ಕಾರ್ಯದರ್ಶಿಗಳಾಗಿ ಕೆ.ಪಿ.ಕೃಷ್ಣಕುಮಾರ್ ಅರಸ್, ಕುಮಾರ್ ರಾಜ್ ಅರಸ್ ನಿರ್ದೇಶಕರುಗಳಾಗಿ ಮುಗುಂದ ರಾಜ್ ಅರಸ್, ಲಕ್ಷö್ಮಣ ರಾಜ್ ಅರಸ್, ವೆಂಟಕರಾಜ್ ಅರಸ್, ಜಯರಾಮರಾಜ್ ಅರಸ್, ರಂಗರಾಜೇ ಅರಸ್ ಮತ್ತಿತರರಿದ್ದರು.