ಚಿತ್ತಾಪುರ: ಬಾಹರಪೇಟದ ಕಳ್ಳಿ ಬಸವೇಶ್ವರ ಮಂದಿರದಲ್ಲಿ ಪುರಸಭೆಯಿಂದ ಸೋಮವಾರ ಹಮ್ಮಿಕೊಂಡಿದ್ದ ವಾರ್ಡ್ 21, 22 ಹಾಗೂ 23ರ ಜನಸ್ಪಂದನ ಕಾರ್ಯಕ್ರಮದಲ್ಲಿ 51 ಅರ್ಜಿಗಳು ಸ್ವೀಕೃತವಾದವು.
ಬೆಳಗ್ಗೆಯಿಂದ ವಾರ್ಡ್ಗಳ ನಿವಾಸಿಗಳು ಬಸವೇಶ್ವರ ದೇವಸ್ಥಾನದತ್ತ ಆಗಮಿಸಿ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು. ರಸ್ತೆಗಳು ಸರಿಯಾಗಿಲ್ಲ, ಚರಂಡಿಯಲ್ಲಿ ಕಸ ತುಂಬಿದೆ, ಮನೆ ಮುಂದಿನ ಕಸ ವಿಲೇವಾರಿ ಮಾಡಲ್ಲ, ಮಳೆ ನೀರು ಸಂಗ್ರಹವಾಗುತ್ತಿದೆ, ಬೀದಿ ದೀಪಗಳು ಸರಿಯಾಗಿ ಕೆಲಸ ಮಾಡಲ್ಲ ಎಂಬುದು ಸೇರಿ ಹಲವು ಸಮಸ್ಯೆ ಹೇಳಿಕೊಂಡರು.
ಪುರಸಭೆ-22, ಕಂದಾಯ ಇಲಾಖೆ-15, ಸಿಡಿಪಿಒ -14, ಜೆಸ್ಕಾಂ ಸಮಸ್ಯೆಗಳ ಬಗ್ಗೆ 2 ಅರ್ಜಿಗಳು ಸಲ್ಲಿಕೆಯಾದವರು. ಕಂದಾಯ ಇಲಾಖೆಗೆ ಸಂಬAಧಪಟ್ಟ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಹಾಗೂ ಇನ್ನಿತರ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು. ಪುರಸಭೆಗೆ ಸಂಬAಧಪಟ್ಟ ರಸ್ತೆ, ಚರಂಡಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದ್ಯತೆ ಮೇರೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಗ್ರೇಡ್- ತಹಸೀಲ್ದಾರ್ ರಾಜಕುಮಾರ ಮರತೂರಕರ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸದಸ್ಯರಾದ ರಮೇಶ ಬೊಮ್ಮನಳ್ಳಿ, ಪ್ರಭು ಗಂಗಣಿ, ನಾಗೂ ಕಲ್ಲಕ್, ವೆಂಕಟೇಶ, ಲೋಹಿತ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.