ಶೃಂಗೇರಿ ಜೆಸಿಐ ಸಪ್ತಾಹದಲ್ಲಿ ಮೆಸ್ಕಾಂ ಹಾಗೂ ಗ್ರಾಪಂ ನೀರು ನಿರ್ವಹಣಾ ಸಿಬ್ಬಂದಿಯನ್ನು ಗೌರವಿಸಲಾಯಿತು. ಸುನೀತಾ, ಉಮಾ, ಆಶೀಶ್ ದೇವಾಡಿಗ, ಸಚಿನ್ ಇತರರಿದ್ದರು. 
ಜಿಲ್ಲೆ

ಜನಸೇವೆಯೇ ಮಾನವ ಧರ್ಮ

ಶೃಂಗೇರಿ: ಸಮುದಾಯಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವುದು ಸಂಸ್ಥೆಯ ಮುಖ್ಯ ಧ್ಯೇಯ. ಜನಸಾಮಾನ್ಯರ ಶ್ರೇಯಸ್ಸಿಗಾಗಿ ದುಡಿಯುವುದು ಮಾನವ ಧರ್ಮ. ಈ ಧರ್ಮವನ್ನು ಜೆಸಿಐ ನಿರ್ವಹಿಸುತ್ತ ಬಂದಿದೆ ಎಂದು ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.

ಮಂಗಳವಾರ ಜೆಸಿಐ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಯುವ ಸಂಘಟನೆಗಳು ಬೆಳೆದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ. ತಂತ್ರಜ್ಞಾನ ಬೆಳೆಯುತ್ತಿದೆ. ಸಂಸ್ಕಾರ, ಸಂಸ್ಕೃತಿ ಮರೆತಿದ್ದೇವೆ ಎಂದರು.

ಪಪಂ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್ ಮಾತನಾಡಿ, ಸಂಘ-ಸಂಸ್ಥೆಗಳು ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡಬೇಕು. ಅಂಥ ಸತ್ಕಾರ್ಯಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ನಾವು ಮಾಡುವ ಕೆಲಸದಲ್ಲಿ ತೃಪ್ತಿಯಿರಬೇಕು. ಕುಟುಂಬಕ್ಕೆ ಸಮಯ ಕೊಟ್ಟು ಸಮಾಜದಲ್ಲಿ ಉತ್ತಮ ಕೆಲಸ ನಿರ್ವಹಿಸಿದಾಗ ಸಮುದಾಯ ನಮ್ಮನ್ನು ಗುರುತಿಸುತ್ತದೆ ಎಂದರು.

ಜೆಸಿಐ ಅಧ್ಯಕ್ಷ ವಿ.ಎಸ್.ಅಶೋಕ್ ಮಾತನಾಡಿ, ದೇವರಲ್ಲಿ ನಾವು ಇಟ್ಟಿರುವ ಶ್ರದ್ಧಾಭಕ್ತಿ ಜೀವನಕ್ಕೆ ಅರ್ಥ ಕಲ್ಪಿಸುತ್ತದೆ. ಮನುಕುಲದ ಸೇವೆಯೇ ನಿಜವಾದ ಧರ್ಮ. ದೀನ ದಲಿತರಿಗಾಗಿ ಮಾಡುವ ಸೇವೆ ಭಗವಂತನನ್ನು ತಲುಪುತ್ತದೆ ಎಂದರು.

ಮೆಸ್ಕಾಂ, ಗ್ರಾಪಂ ನೀರು ನಿರ್ವಹಣಾ ಸಿಬ್ಬಂದಿಯನ್ನು ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಎಚ್.ಜೆ.ರಾಘವೇಂದ್ರ, ರಮೇಶ್ ಶೂನ್ಯ, ಚೇತನ್, ಎಚ್.ಸಿ.ಶ್ರೀಕಾಂತ್, ಸುನೀತಾ, ಸಿ.ಎನ್.ಶ್ರೀಕಾಂತ್, ಮೋಹನ್ ಬೋಳೂರು, ಉಮಾ, ಆಶೀಶ್ ದೇವಾಡಿಗ, ಸಚಿನ್ ಇದ್ದರು.