ಗೋಕಾಕ ನಗರದಲ್ಲಿ ಲಯನ್ಸ್​ ಸಂಸ್ಥೆಯ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭ ಜರುಗಿತು. ಭಾರತಿ ವಡವಿ, ಅಶೋಕ ಲಗಮಪ್ಪಗೋಳ, ಸುರೇಶ ಶಿಂದಿಹಟ್ಟಿ, ಪ್ರಶಾಂತ ಅಂಕದವರ, ಶಂಕರ ದೊಡಮನಿ ಇತರರು ಇದ್ದರು. 
ಜಿಲ್ಲೆ

ಜನಸೇವೆಯಿಂದ ನೆಮ್ಮದಿ ಲಭ್ಯ

ಗೋಕಾಕ: ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಜಗತ್ತಿನಾದ್ಯಂತ ಲಯನ್ಸ್​ ಸಂಸ್ಥೆ ಜನರ ಮನದಲ್ಲಿ ನೆಲೆಸಿದೆ ಎಂದು ಲಯನ್ಸ್​ ಕ್ಲಬ್​ನ ಜಾಗತಿಕ ಸೇವಾ ತಂಡದ ಸಂಯೋಜಕಿ ಭಾರತಿ ವಡವಿ ಹೇಳಿದರು.

ನಗರದ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇಲ್ಲಿಯ ಲಯನ್ಸ್​ ಸಂಸ್ಥೆಯ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು. ಸೇವೆಯಿಂದ ನೆಮ್ಮದಿ ದೊರೆಯುತ್ತದೆ. ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿ ಜನ್ಮ ಸಾರ್ಥಕ ಮಾಡಿಕೊಳ್ಳಲು ಲಯನ್ಸ್​ ಸಂಸ್ಥೆ ಸೂಕ್ತ ವೇದಿಕೆಯಾಗಿದೆ. ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸಮಾಜ ಸೇವೆ ನಡೆಯಲಿ ಎಂದು ಆಶಿಸಿದರು. ಅಧ್ಯರಾಗಿ ಅಶೋಕ ಲಗಮಪ್ಪಗೋಳ, ಕಾರ್ಯದರ್ಶಿಯಾಗಿ ಸುರೇಶ ಶಿಂದಿಹಟ್ಟಿ, ಖಜಾಂಚಿಯಾಗಿ ಪ್ರಶಾಂತ ಅಂಕದವರ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಪ್ರೊ.ಬಿ.ಬಿ. ನಂದ್ಯಾಲ, ಡಾ.ಅಶೋಕ ಪಾಟೀಲ, ಶಂಕರ ದೊಡ್ಡಮನಿ ಇದ್ದರು.