ಸಂಜೀವಕುಮಾರ ಜುನ್ನಾ ಹುಮನಾಬಾದ್
ಹಳ್ಳಿಖೇಡ(ಬಿ) ನಾಲ್ಕೈದು ವರ್ಷದ ಹಿಂದೆ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಪ್ರಥಮ ಬಾರಿಗೆ ಸ್ವಚ್ಛತೆ ಸೇರಿ ವಿವಿಧ ಕೆಲಸಗಳಿಗಾಗಿ ವಾಹನಗಳನ್ನು ಖರೀದಿಸಲಾಗಿದ್ದು, ಜನಸೇವೆಗಾಗಿ ಕಾಯುತ್ತಿವೆ.
ಪುರಸಭೆಯಿಂದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸುಮಾರು 1.6 ಕೋಟಿ ರೂ. ವೆಚ್ಚದಲ್ಲಿ ನೂತನ ಕಚೇರಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿದ್ದು, ಮುಗಿಯುವ ಹಂತಕ್ಕೆ ತಲುಪಿದೆ. ಈ ಮಧ್ಯೆ ಸ್ವಚ್ಛತೆ ಸೇರಿ ಸಾರ್ವಜನಿಕರ ಸೇವಾ ಕಾರ್ಯಗಳಿಗಾಗಿ ಎಸ್ಎಫ್ಸಿ ಮತ್ತು 14 ಹಾಗೂ 15ನೇ ಹಣಕಾಸು ಯೋಜನೆಯಡಿ ಅಂದಾಜು ವೆಚ್ಚ 18 ಲಕ್ಷ ರೂ.ಗಳಲ್ಲಿ ಮೂರು ಆಟೋ ಟಿಪ್ಪರ್, 17 ಲಕ್ಷ ರೂ.ಗಳಲ್ಲಿ 2 ಟ್ರಾಕ್ಟರ್ ಇಂಜಿನ್, ವಾಟರ್ ಟ್ಯಾಂಕ್ ಟ್ರಾಲಿ 1, ಟ್ರಾಲಿ 1 ಮತ್ತು 9.5 ಲಕ್ಷ ರೂ.ಗಳಲ್ಲಿ ಒಂದು ಸಕ್ಕಿಂಗ್ ಕಂ ಜೆಟಿಂಗ್ ಮಷಿನ್ ಖರೀದಿಸಲಾಗಿದೆ. ಆದರೆ ಬಳಕೆ ಮಾಡದೆ ಕಚೇರಿ ಆವರಣದಲ್ಲೇ ನಿಂತಿದ್ದು, ತುಕ್ಕು ಹಿಡಿಯುವ ಮೊದಲು ಉಪಯೋಗಕ್ಕೆ ಚಾಲನೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸುಮಾರು 35 ಲಕ್ಷ ರೂ.ಗಳಲ್ಲಿ ಜೆಸಿಬಿ ಯಂತ್ರ ಕೂಡ ಖರೀದಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಅಲ್ಲದೆ ಎಸ್ಎಫ್ಸಿ ಯೋಜನೆಯಡಿ 1 ಲಕ್ಷ ರೂ.ಗಳಲ್ಲಿ ಹವಾನಿಯಂತ್ರಿತ ಶವಪೆಟ್ಟಿಗೆ ಖರೀದಿಸಲಾಗಿದೆ. ಆದರೆ ಇವು ಜನಸೇವೆಗೆ ಮುಕ್ತವಾಗುವುದು ಯಾವಾಗ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ. ತೆರಿಗೆ ಹಣದಲ್ಲಿ ಖರೀದಿಸಿದ ವಾಹನಗಳನ್ನು ನೋಂದಣಿ ಮತ್ತು ಇತರ ನೆಪ ಹೇಳಿ ಮೂಲೆಗುಂಪು ಮಾಡಬಾರದು ಎಂಬುದು ಅವರ ಆಶಯವಾಗಿದೆ.
ಹಳ್ಳಿಖೇಡ(ಬಿ)ದ ಸವರ್ಾಂಗೀಣ ಅಭಿವೃದ್ಧಿಗೆ ಸಕರ್ಾರ ಹಾಗೂ ವಿಶೇಷವಾಗಿ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ್ ಸಹಕಾರದಿಂದ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪುರಸಭೆ ನೂತನ ಕಟ್ಟಡ ನಿಮರ್ಾಣ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು, ಶೀಘ್ರ ಉದ್ಘಾಟನೆಗೊಳ್ಳಲಿದೆ. ತಿಂಗಳ ಹಿಂದೆ ವಿವಿಧ ವಾಹನ ಹಾಗೂ ಯಂತ್ರಗಳನ್ನು ಖರೀದಿಸಲಾಗಿದ್ದು, ನೋಂದಣಿ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ ಜೆಸಿಬಿ ಯಂತ್ರ ಖರೀದಿ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲಿ ಬರಲಿದೆ. ಪಟ್ಟಣದಲ್ಲಿನ ತ್ಯಾಜ್ಯ ವಿಲೇವಾರಿಗಾಗಿ ಪುರಸಭೆಯಿಂದ ಹೊರವಲಯದಲ್ಲಿ 10 ಎಕರೆ ಭೂಮಿ ಖರೀದಿಸಲು ಚಿಂತನೆ ನಡೆದಿದೆ.
| ಮಹಾಂತಯ್ಯ ತೀರ್ಥ, ಅಧ್ಯಕ್ಷ, ಪುರಸಭೆ ಹಳ್ಳಿಖೇಡ(ಬಿ