ಜಿಲ್ಲೆ

ಜನಸೇವಕ ಬಳಗದಿಂದ ಯೋಧರಿಗೆ ಸನ್ಮಾನ

ವಿಜಯಪುರ: ಭಾರತೀಯ ಸೇನಾ ದಿನಾಚರಣೆ ಅಂಗವಾಗಿ ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ವೀರ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಜನಸೇವಕ ಬಳಗದಿಂದ ಸೈನಿಕರ ದಿನಾಚರಣೆಯನ್ನು ಆಚರಿಸಲಾಯಿತು. ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧರಾದ ಬಸಯ್ಯ ಮಠ, ಅಣ್ಣಾರಾಯ ಬಿರಾದಾರ ಹಾಗೂ ಪ್ರಸ್ತುತ ಗಡಿ ಕಾಯುವಲ್ಲಿ ನಿರತರಾದ ಬಬಲಾದ ಗ್ರಾಮ ವೀರ ಯೋಧರಾದ ಬಸವರಾಜ ಪಾರೆ, ಯಲ್ಲಪ್ಪ ವಾಲಿಕಾರ, ಬಸವರಾಜ ಪೂಜಾರಿ, ನಿಂಬಾಳ ಗ್ರಾಮದ ಸಂತೋಷ ಪವಾರ, ಕೂಡಗಿ ಗ್ರಾಮದ ಸಚಿನ ಬಿರಾದಾರ, ಅಹಿರಸಂಗ ಗ್ರಾಮದ ಜಟ್ಟು ಪೂಜಾರಿ, ಬೀರಪ್ಪ ಪೂಜಾರಿ ಸೇರಿ ಒಂಭತ್ತು ಯೋಧರನ್ನು ಜನಸೇವಕ ಬಳಗ ಹಾಗೂ ಬಬಲಾದ ಗ್ರಾಮದ ಹಿರಿಯರು ಸೇರಿ ಸನ್ಮಾನಿಸಿದ್ರು. ಇದಕ್ಕೂ ಮೊದಲು ಕೇಕ್ ಕತ್ತರಿಸುವ ಮೂಲಕ ಜನಸಮೂಹದ ಮುಖಾಂತರ ಯೋಧರ ಮೇಲೆ ಪುಷ್ಪಾರ್ಚನೆ ಮಾಡಿ ವಿಶಿಷ್ಠವಾಗಿ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದ ವೇಳೆ ಭಾರತ ಮಾತೆಗೆ ಜೈಕಾರ ಹಾಗೂ ಜೈ ಜವಾನ್-ಜೈ ಕಿಸಾನ್ ಎಂಬ ಜೈಕಾರ ಮೊಳಗಿತ್ತು. ರೈತರು ಮತ್ತು ಯೋಧರು ನಮ್ಮ ದೇಹದ ಎರಡು ಕಣ್ಣುಗಳು ಎಂಬ ಘೋಷಣೆಯನ್ನು ಹಾಕಲಾಯಿತು. ಇದೆ ಸಂದರ್ಭದಲ್ಲಿ ಪ್ರೀತು ದಶವಂತ ಮಾತನಾಡಿ ನಮ್ಮ ಭಾರತ ಮಾತೆಯ ವೀರಯೋಧರು ದೇಶಕ್ಕಾಗಿ ಬಿಸಿಲು, ಚಳಿ, ಗಾಳಿ, ಮಳೆ ಅನ್ನದೆ ತಮ್ಮ ಜೀವವನ್ನು ಪಣಕ್ಕಿಟ್ಟು ಗಡಿಯಲ್ಲಿ ಹೋರಾಡುತ್ತಿದ್ದಾರೆ. ಹಾಗಾಗಿ ನಾವು ನೀವೆಲ್ಲರೂ ನೆಮ್ಮದಿಯಿಂದ ಜೀವನ ಮಾಡಲು ಅವರ ಪರಿಶ್ರಮವೇ ಕಾರಣ ಎಂದು ಯೋಧರ ಸೇವೆಯ ಕುರಿತು ಅರಿವು ಮೂಡಿಸಿದ್ರು.