ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ವಿವಿಧ ರಾಜಕೀಯ ಪಕ್ಷ, ರೈತ ಸಂಘ, ಕನ್ನಡಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳಿAದ ಎಚ್.ಟಿ.ರಾಜೇಂದ್ರ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಎಚ್.ಎಚ್.ದೇವರಾಜ್, ಹೊಲದಗದ್ದೆ ಗಿರೀಶ್, ಎಂ.ಪಿ.ಕುಮಾರಸ್ವಾಮಿ, ಎಚ್.ಎಸ್.ಮಂಜಪ್ಪ, ಜಿ.ಎಸ್.ಚಂದ್ರಪ್ಪ ಮತ್ತಿತರರಿದ್ದರು.  
ಜಿಲ್ಲೆ

ಜನಸಾಮಾನ್ಯರ ಏಳಿಗೆಗೆ ಜೀವನ ಮೀಸಲಿಟ್ಟವರು ಎಚ್.ಟಿ.ರಾಜೇಂದ್ರ

ಚಿಕ್ಕಮಗಳೂರು: ಸಮಾಜದಲ್ಲಿನ ಶೋಷಿತರು, ರೈತರು, ದಲಿತರ ಮೂಲಹಕ್ಕಿಗಾಗಿ ವೈಯಕ್ತಿಕ ಜೀವನವನ್ನು ಜನಸಾಮಾನ್ಯರ ಏಳಿಗೆಗೆ ಮೀಸಲಿಟ್ಟು ಚಳವಳಿ ರೂಪಿಸಿದ ಅಪರೂಪದ ಜನನಾಯಕ ರಾಜೇಂದ್ರ ಅವರು ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷ, ರೈತ ಸಂಘ, ಕನ್ನಡಪರ ಸಂಘಟನೆಗಳು ಹಾಗೂ ಪ್ರಗತಿಪರ ಮುಖಂಡರು ಆಯೋಜಿಸಿದ್ದ ಎಚ್.ಟಿ.ರಾಜೇಂದ್ರ ಅವರ ಬದುಕಿನ ಒಂದು ನೆನಪು ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯಾವುದೇ ವರ್ಗದ ಜನರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಕಂಡುಬAದಲ್ಲಿ ನೇರವಾಗಿ ಖಂಡಿಸುವ ವ್ಯಕ್ತಿತ್ವ ಅವರಲ್ಲಿತ್ತು. ವೈಯಕ್ತಿಕ ಜೀವನದಲ್ಲಿ ಅನೇಕ ಸಮಸ್ಯೆಗಳಿದ್ದರೂ ಕೂಡಾ ಜನರ ನೋವು, ನಲಿವುಗಳಿಗೆ ಸ್ಪಂದಿಸುವ ಅಗಾಧವಾದ ಗುಣವನ್ನು ಹೊಂದಿದ್ದರು ಎಂದರು.

ಅಪ್ಪಟ ಜಾತ್ಯಾತೀತ ನಿಲುವುಗಳನ್ನು ರಾಜೇಂದ್ರ ಅವರು ಹೊಂದಿದ್ದರು. ಎಲ್ಲ ರಾಜಕೀಯ ಪಕ್ಷದವರು ಒಮ್ಮತದಿಂದ ಒಪ್ಪುವ ಅಪರೂಪದ ರಾಜಕಾರಣಿ ಎಂದರೆ ತಪ್ಪಾಗುವುದಿಲ್ಲ. ಇವರು ಬಡವರ ಕಲ್ಯಾಣಕ್ಕಾಗಿ ರೂಪಿಸಿದ ಚಳವಳಿಗಳಿಂದಾಗಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಹೇಳಿದರು.

ಶೃಂಗೇರಿಯಲ್ಲಿ ವಿಶಿಷ್ಟತೆಯಿಂದ ರಾಜಕಾರಣ ಮಾಡಿ ರಾಜೇಂದ್ರ ಅವರು ಮನೆ ಮಾತಾಗಿದ್ದರು. ಅಂದಿನ ಗೋವಿಂದೇಗೌಡರು ಶಾಸಕರಾಗಿ, ಸಚಿವರಾಗಲು ಬಹಳಷ್ಟು ತ್ಯಾಗ, ಕೊಡುಗೆ ರಾಜೇಂದ್ರ ಅವರದ್ದಿದೆ. ಜೀವನದುದ್ದಕ್ಕೂ ಜಾತ್ಯಾತೀತ ನಿಲುವು ಹಾಗೂ ಎಚ್.ಡಿ.ದೇವೇಗೌಡರ ಆಪ್ತರಾಗಿದ್ದ ಅವರು ಬೇರೆ ಯಾವುದೇ ಪಕ್ಷಕ್ಕೆ ತೆರಳದೇ ಜೆಡಿಎಸ್‌ನಿಂದಲೇ ಮುನ್ನೆಡೆದಿದ್ದರು ಎಂದರು.

ರಾಜೇAದ್ರ ಅವರು ಮೇಧಾವಿ ರಾಜಕಾರಣಿಯಾಗಿ ಬಂದವರು. ಅವರ ಕಾರ್ಯವೈಖರಿ, ವಿಚಾರಧಾರೆ, ಶೋಷಿತರ ಪರವಾದ ಅಪಾರ ಕಾಳಜಿಗಳಿಂದಲೇ ನಾವುಗಳು ನೆನೆಯುತ್ತಿz್ದೆÃವೆ. ಅನ್ಯಾಯ ಕಂಡಲ್ಲಿ ಎದೆ ಗುಂದದೇ ನ್ಯಾಯ ಪರವಾದ ಹೋರಾಟಕ್ಕಾಗಿ ಸೆರೆವಾಸವನ್ನು ಅನುಭವಿಸಿದ ಮರೆಯದ ಮಾಣಿಕ್ಯ ಎಂದು ಬಣ್ಣಿಸಿದರು.

ಕಾಲಕ್ರಮೇಣ ರಾಜಕೀಯ ಕ್ಷೇತ್ರದಲ್ಲಿ ಬಿ.ಕೆ.ಸುಂದರೇಶ್ ಮತ್ತು ಎಂ.ಡಿ.ಗAಗಯ್ಯ ಕಾಲಘಟ್ಟದಲ್ಲಿ ಹೆಜ್ಜೆ ಹಾಕಿ ಪರ್ವದ ದಿನಗಳನ್ನು ರಾಜೇಂದ್ರ ಅವರು ಕಂಡಿದ್ದರು. ನಂತರ ಜಿಪಂ ಸದಸ್ಯ, ಸ್ಥಾಯಿಸಮಿತಿ ಅಧ್ಯಕ್ಷರು ಸೇರಿದಂತೆ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದು ಪಕ್ಷದ ಯಾವುದೇ ಕೆಲಸದಲ್ಲಿ ಲಾಭಕ್ಕಾಗಿ ಆಸೆಪಡದೇ ಜನರ ಮೂಲಹಕ್ಕಿಗಾಗಿ ಸೇವೆ ಸಲ್ಲಿಸಿದ ಜನನಾಯಕರು ಎಂದರು.

ಕಾAಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿದ್ದರೂ ಜನಾನುರಾಗಿಯಾಗಿ ಬದುಕಿದವರು ರಾಜೇಂದ್ರ ಅವರು. ವ್ಯಕ್ತಿಯ ಸಿದ್ಧಾಂತದಿAದ ಯಾವುದೇ ಪಕ್ಷದ ಮುಖಂಡರುಗಳು ಅಜಾತಶೃತುವನ್ನು ಪಾಲಿಸುತ್ತಿದ್ದು ಆ ಸಾಲಿನಲ್ಲಿ ರಾಜೇಂದ್ರ ಅವರು ಸರ್ವಶ್ರೇಷ್ಟರು ಎನ್ನುಲು ಸಂದೇಹವಿಲ್ಲ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಸ್ಪರ್ಧೆ ಹಾಗೂ ಅಧಿಕಾರದಾಸೆಗೆ ಜನ್ಮದಿನದ ಕಟೌಟ್‌ಗಳು ಎಲ್ಲೆಡೆ ರಾರಾಜಿಸುತ್ತಿದ್ದಾರೆ. ಅಧಿಕಾರ ಕ್ಷೀಣಿಸಿದರೆ ಯಾವುದು ಇರುವುದಿಲ್ಲ. ಹೀಗಾಗಿ ಮೊದಲು ಜನ್ಮಕೊಟ್ಟ ಪಾಲಕರಿಗೆ ಶುಭಾಶಯವನ್ನು ತಿಳಿಸಬೇಕು ಎಂದು ಸಲಹೆ ನೀಡಿದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ, ರಾಜೇಂದ್ರ ವ್ಯಕ್ತಿತ್ವವನ್ನು ದೂರದಿಂದ ಗಮನಿಸಿದ ಅನುಭವಿದೆ. ಆದರೂ ಸರಳ, ಸಜ್ಜನಿಕೆಯ ಜೀವನಶೈಲಿ ರೂಪಿಸಿಕೊಂಡವರು. ಡಾ. ಬಿ.ಆರ್.ಅಂಬೇಡ್ಕರ್ ಸಿದ್ಧಾಂತಕ್ಕೆ ನ್ಯಾಯಬದ್ಧವಾಗಿ ನಡೆದುಕೊಂಡು ಬಡವರ ಕಲ್ಯಾಣಕ್ಕೆ ದುಡಿದಿರುವ ನಾಯಕರು ಎಂದು ಹೇಳಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಶೃಂಗೇರಿಯ ಮಲೆನಾಡು ಭಾಗದಲ್ಲಿ ರಾಜಕಾರಣ ಆರಂಭಿಸಿದ ರಾಜೇಂದ್ರ ಅವರು ನಿರಂತರ ಹೋರಾಟದ ಮುಖೇನ ಅನ್ಯಾಯಕ್ಕೆ ಒಳಗಾದ ಜನರಿಗೆ ಹತ್ತಿರವಾಗಿದ್ದರು. ಇಂದಿನ ಆಧುನಿಕ ಜಗತ್ತಿನಲ್ಲಿ ರಾಜಕೀಯ ನಾಯಕರು ಇವರ ಬದುಕಿನ ಹೋರಾಟಗಳನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕಿದೆ ಎಂದರು.

ರೈತ ಸಂಘದ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಸರ್ವ ಪಕ್ಷಗಳ ಮುಖಂಡರುಗಳು ಒಪ್ಪುವ ಬುದ್ದಿ ಜೀವಿ, ರೈತಪರ ಹೋರಾಟಗಾರ ಹಾಗೂ ಸಮಾಜದ ಹಿತಚಿಂತನೆಯ ವ್ಯಕ್ತಿತ್ವ ಹೊಂದಿರುವ ಅಜಾತಶೃತು ರಾಜೇಂದ್ರ ಅವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಚ್.ಎಸ್.ಮಂಜಪ್ಪ, ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್, ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಸಿಪಿಐ ಜಿಲ್ಲಾ ಘಟಕದ ರಾಧಾ ಸುಂದ್ರೇಶ್, ಮುಖಂಡರಾದ ಎನ್.ಡಿ.ಮಂಜುನಾಥ್, ಹುಣಸೇಮಕ್ಕಿ ಲಕ್ಷö್ಮಣ್, ರಾಮಚಂದ್ರ, ಎಂ.ಡಿ.ರಮೇಶ್, ಸುನೀಲ್, ಹೆಚ್.ಎನ್. ಕೃಷ್ಣೇಗೌಡ, ಸಂತೋಷ್ ಲಕ್ಯಾ ಮತ್ತಿತರರಿದ್ದರು.