ಜಿಲ್ಲೆ

ಜನಸಂಪರ್ಕ ಕಾರ‌್ಯಾಲಯ ದೇವಾಲಯವಾಗಲಿ

ಚಿತ್ರದುರ್ಗ: ನಗರದ ಜೆಸಿಆರ್ ಬಡಾವಣೆಯಲ್ಲಿ ಶುಕ್ರವಾರ ಸಂಸದ ಗೋವಿಂದ ಎಂ.ಕಾರಜೋಳ ಅವರ ಜನ ಸಂಪರ್ಕ ಕಚೇರಿ ಆರಂಭವಾ ಯಿತು. ಸಾನ್ನಿಧ್ಯ ವಹಿಸಿದ್ದ ನಾನಾ ಮಠಾಧೀಶರು, ಈ ಜನಸಂಪರ್ಕ ಕಚೇರಿ ಕ್ಷೇತ್ರದ ನೊಂದ ಜನರ ಸಮಸ್ಯೆಗಳನ್ನು ಪರಿಹರಿಸುವ, ಅಭಿ ವೃದ್ಧಿಗೆ ಮುನ್ನುಡಿ ಬರೆಯುವ ಕೇಂದ್ರವಾಗಲಿ ಎಂದು ಪೂಜ್ಯರು ಶುಭಹಾರೈಸಿದರು. ಕಾರಜೋಳ ಅವರು ಪೂಜ್ಯರನ್ನು ಗೌರವಿಸಿ, ಆರ್ಶೀವಾದ ಪಡೆದರು.
ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರು ಮಾತನಾಡಿ,ಬಸವಣ್ಣ ನಾಡಿನ ಕಾರಜೋಳ ಅವರಿಗೆ ಶರಣರ,ದಾ ರ್ಶನಿಕರ ಮಹತ್ವ ಗೊತ್ತಿದೆ. ಮಂತ್ರಿ,ಡಿಸಿಎಂ ಆಗಿದ್ದ ಅವರಿಗೆ ಅನುಭವವಿದೆ. ಅಧಿಕಾರಾವಧಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಲಿ.ಉತ್ತಮ ಸಂಸದರೆಂದು ಕರೆಸಿಕೊಳ್ಳುವಂತಾಗಲಿ ಎಂದರು.
ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಮಾತನಾಡಿ, ಕಚೇರಿ ಎಂದರೆ ಆಸ್ಪತ್ರೆ ಇದ್ದಂತೆ. ಜನರು ಇ ಲ್ಲಿಗೆ ಸಂಕಷ್ಟಗಳನ್ನು ಬಗೆಹರಿಸಿಕೊಳ್ಳಲು ಬರುತ್ತಾರೆ. ಕಾರಜೋಳ ಅವರು ಹಿಂದೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನೀರಾ ವ ರಿ ಸೌಲಭ್ಯದ ಮೂಲಕ ಚಿತ್ರದುರ್ಗ ಹಸಿರಾಗಿಸಲಿ,ಈ ಕಾರ‌್ಯಾಲಯ ದೇವಾಲಯವಾಗಲಿ ಎಂದರು.
ಮುರುಘಾಮಠದ ಡಾ.ಶ್ರೀಬಸವಪ್ರಭು ಸ್ವಾಮೀಜಿ ಅವರು ಮಾತನಾಡಿ,ಕಾರಜೋಳ ಅವರಲ್ಲಿ ಎಲ್ಲರನ್ನು ಪ್ರೀತಿಸುವ ಗುಣವಿದೆ. ಇವರಿಂದಾಗಿ ಚಿತ್ರದುರ್ಗ ಜಿಲ್ಲೆಗೆ ಭದ್ರೆ ತ್ವರಿತವಾಗಿ ಹರಿದು ಬರಲಿ ಎಂದು ಆಶಿಸಿದರು. ಹಿರಿಯೂರು ಆದಿಜಾಂಬವ ಮಠದ ಶ್ರೀ ಷ ಡಾಕ್ಷರಮುನಿ ಸ್ವಾಮೀಜಿ ಅವರು ಮಾತನಾಡಿ,ಸಂಸದರಾದ ಬಳಿಕ ಕಾರಜೋಳ ಅವರು,ಜಿಲ್ಲೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರದ ಅನೇಕ ಸಚಿವರನ್ನು ಭೇಟಿ ಮಾಡಿ ಗಮನ ಸೆಳೆದಿದ್ದಾರೆ. ಜ್ಞಾನವಂತಾಗಿರುವ ಅವರು ಜಿಲ್ಲೆ ಜನರ ಸಮಸ್ಯೆಗಳನ್ನು ಪರಿಹರಿಸಲಿ ಎಂದರು.
ಮಡಿವಾಳ ಗುರುಪೀಠದ ಮಡಿವಾಳ ಮಾಚಿದೇವ ಸ್ವಾಮೀಜಿ,ಮಾದಾರ ಚನ್ನಯ್ಯ ಗುರುಪೀಠದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಮಾತನಾಡಿದರು. ಶ್ರೀ ಅಖಿಲಭಾರತಯಾದವ ಗುರುಪೀಠದ ಶ್ರೀ ಕೃಷ್ಣಾಯಾದವನಂದ ಸ್ವಾಮೀಜಿ,ಬಂ ಜಾರ ಗುರುಪೀಠದ ಶ್ರೀ ಸೇವಾಲಾಲ್ ಸ್ವಾಮೀಜಿ, ಶ್ರೀ ಮೇದಾರ ಕೇತೇಶ್ವರ ಗುರುಪೀಠದ ಶ್ರೀ ಇಮ್ಮಡಿ ಬಸವ ಬಸವಕೇತೇಶ್ವರ ಸ್ವಾ ಮೀಜಿ,ಸಿದ್ದಯ್ಯನ ಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ,ಚಕ್ಕೋತಿ ಶ್ರೀ ಶಿವಮೂರ್ತಿ ಸ್ವಾಮೀಜಿ,ಛಲವಾದಿ ಗುರುಪೀಠದ ಬಸವನಾಗೀ ದೇವ ಸ್ವಾಮೀಜಿ,ಪ್ರಜಾಪಿತ ಈಶ್ವರೀಯ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ದಿವ್ಯಾಮತ್ತಿತರ ಹರಗುರು ಚರಮೂರ್ತಿಗಳಿದ್ದರು.
ಶಾಂತಾದೇವಿ ಕಾರಜೋಳ,ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ,ಎಸ್.ಕೆ.ಬಸವರಾಜನ್,ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ,ಹ ನುಮಂತೇ ಗೌಡ, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಬಸವರಾಜನ್,ಮಾಜಿ ಸದಸ್ಯರು,ನಗರಸಭಾ ಸದಸ್ಯರು,ಉಮೇಶ್‌ಕಾರಜೋಳ, ಜಿ. ಎಸ್.ಅನಿತ್‌ಕುಮಾರ್,ಉಮೇಶ್‌ಕಾರಜೋಳ ಮತ್ತಿತರ ಪಕ್ಷದ ಪ್ರಮುಖರು,ಕಾರ‌್ಯಕರ್ತರು ಇದ್ದರು.
ಪ್ರಾಮಾಣಿಕ ಪ್ರಯತ್ನ
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು,ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರು,ಪರಿಶಿಷ್ಟ ಜಾತಿ,ಪಂಗಡದವರು ಹಾಗೂ ಬಡತನರೇಖೆಗಿಂತ ಕೆಳಗಿರುವ ಜನರ ಜೀವನಮಟ್ಟ ಸುಧಾರಿಸ ಬೇಕಿ ದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಸಂಕಲ್ಪ ಮಾಡಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಮಾ ಡಿ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೇನೆ. ರಾ.ಹೆ.,ರೈಲ್ವೆ,ಪ್ರವಾಸಿತಾಣಗಳ ಅಭಿವೃದ್ಧಿ,ಕೇಂದ್ರಿಯ ವಿದ್ಯಾಲಯ,ಏಕಲವ್ಯ ಮಾದ ರಿ ವಸತಿ ಶಾಲೆ,ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಸಹಿತ ಹಲವು ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡುವುದಾಗಿ ಹೇಳಿದರು. ಓಬಣ್ಣನ ಹ ಳ್ಳಿ ಪುನರ್‌ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಡಿಸಿಗೆ ಸೂಚಿಸಿದ್ದಾಗಿ ಹೇಳಿದರು.