ಜಿಲ್ಲೆ

'ಜನಸಂಖ್ಯೆ ಅಸಮತೋಲನ' ಕುರಿತು ಸಂವಾದ

ಮೈಸೂರು: ‘ಮಂಥನ’ ಸಂಘಟನೆಯಿಂದ ಆ.5ರಂದು ಜನಸಂಖ್ಯೆ ಅಸಮತೋಲನ ಹಾಗೂ ರಾಷ್ಟ್ರೀಯ ಸುರಕ್ಷತೆ ಮೇಲೆ ಅದರ ಪರಿಣಾಮ ಕುರಿತ ಸಂವಾದ ಹಮ್ಮಿಕೊಳ್ಳಲಾಗಿದೆ.
ನಗರದ ಜೆ.ಎಲ್.ಬಿ.ರಸ್ತೆಯಲ್ಲಿರುವ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿರ್ಯ್ಸ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಸಂವಾದ ನಡೆಯಲಿದೆ. ಕೇರಳದ ನಿವೃತ್ತ ಡಿಜಿಪಿ ಎಂ.ಎನ್.ಕೃಷ್ಣಮೂರ್ತಿ, ರಾಜ್ಯ ಸರ್ಕಾರದ ಮಾಜಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಂ.ಮದನ್‌ಗೋಪಾಲ್ ಸಂವಾದ ನಡೆಸಿಕೊಡಲಿದ್ದಾರೆ.
ಆಸಕ್ತರು ವೆಬ್‌ಸೈಟ್ ಠಿಠಿ://್ಛಟ್ಟಞ.ಜ್ಝಛಿ/4ಉ4ಖಿಉ5ಖಿಛಿಟಿಠಿಟಿ87 ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ಮೊ. 98804 35175 ಸಂಪರ್ಕಿಸಬಹುದು.