ಜಿಲ್ಲೆ

ಜನಸಂಖ್ಯೆ ಅನುಗುಣವಾಗಿ ಒಳಮೀಸಲಾತಿ

ಬಾಗಲಕೋಟೆ : ಒಳಮೀಸಲಾತಿ ವರ್ಗೀಕರಣವನ್ನು ಜಾರಿ ಮಾಡಲು ಹೆಚ್ಚಿನ ಅಧಿಕಾರವನ್ನು ಸುಪ್ರೀಂಕೋರ್ಟ್ ಆದೇಶ ನೀಡಿದ್ದು ಸ್ವಾಗರ್ಹ ಆದರೆ ಮತ್ತೊಮ್ಮೆ ಜನಸಂಖ್ಯೆ ಸಮೀಕ್ಷೆ ನಡೆಸಿ ಜನಸಂಖ್ಯೆ ಅನುಗುಣವಾಗಿ ಒಳಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ರಾಜು ರಾಠೋಡ ಆಗ್ರಹಿಸಿದರು.

ನವನಗರದ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರ ಗಳಿಗೆ ಹೆಚ್ಚಿನ ಅಧಿಕಾರ ನೀಡಿದ್ದು ಇನ್ನೊಮ್ಮೆ‌ಮರುಪರಿಶೀಲಿಸಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿ ಸಿ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಯವರನ್ನು ಒತ್ತಾಯಿಸಿದರು.

ಜಾತಿ ಜನಗಣತಿ ಪ್ರಕಾರ ಮೀಸಲಾತಿ ನೀಡುವುದಾದರೆ ಅದನ್ನು ಪ್ರತಿಶತ ಪ್ರಮಾಣ ಹೆಚ್ಚಿಸಿ ನೀಡಬೇಕು.‌ಈಗ ನ್ಯಾಯಾಲಯದ ಆದೇಶದಂತೆ ಜಾರಿಯಾದರೆ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದರು.

ಸಮುದ್ರದ ಮೀನಿನಂತೆ ಎಲ್ಲರೂ ಒಂದಾಗಿ‌೧೦೧ ಜಾತಿಯವರು ಇದ್ದು ಅವರನ್ನು ಈಗ ವಿಂಗಡಿಸಿ ಅನ್ಯಾಯ ಮಾಡಬಾರದು.‌ಒಂದು ವೇಳೆ ವಿಂಗಡಿಸಿದರೂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಬಾಂಗ್ಲಾ ದೇಶದಲ್ಲಿ ಮೀಸಲಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಅನಾಹುತ ನಡೆದಿದೆ ಅದೇ ಮಾದರಿಯಲ್ಲಿ ರಾಜ್ಯದಲ್ಲಿ ನಡೆಯಬಾರದು ಹೀಗಾಗಿ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು ದೂರದೃಷ್ಠಿಯ ನಾಯಕರಾಗಿದ್ದು ಯಾವುದೇ ಸಮಾಜಕ್ಕೆ ಅನ್ಯಾಯ ಆಗದೇ ಒಳಮೀಸಲಾತಿ ಜಾರಿ ಮಾಡದೇ ಯಥಾಸ್ಥಿತಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ವಿ.ಆರ್.ಚವ್ಹಾಣ, ಪಾಂಡುರಂಗ ಲಮಾಣಿ, ಪ್ರಕಾಶ ರಾಠೋಡ, ಶಿವಾನಂದ ರಾಠೋಡ, ಪರಮೇಶ ರಾಠೋಡ, ರಮೇಶ ನಾಯಕ , ಬಲರಾಮ ಪವಾರ ಪತ್ರಿಕಾಗೋಷ್ಠಿಯಲ್ಲಿ ದ್ದರು.