ಯಾದಗಿರಿ: ಅಪ್ಪಾ ಡಿಡಿಪಿಐ ಬಂದ ಪುಟ್ಟ-ಹೋದ ಪುಟ್ಟ ಎಂಬAತೆ ಕೆಲಸ ಮಾಡಬೇಡ. ಹಿಂದುಳಿದ ಜಿಲ್ಲೆ ಯಾದಗಿರಿ ಶೈಕ್ಷಣಿಕ ಫಲಿತಾಂಶದಲ್ಲಿ ಮುಂದೆ ಬರುವಂತೆ ಕೆಲಸ ಮಾಡು. ಹೀಗೆ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡವರು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ.
ತಡಿಬಿಡಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯವನು ನೀನು. ನಿನ್ನದು ಪ್ರಬುದ್ಧರು ಮತ್ತು ಕೆಲಸಗಾರರ ಜಿಲ್ಲೆ. ಅಲ್ಲಿಂದ ಬಂದ ನೀನು ಏನು ಮಾಡುತ್ತಿದ್ದೀಯಾ? ವಾರದಲ್ಲಿ ಎಷ್ಟು ದಿನ ಇಲ್ಲಿ ಇರುತ್ತಿ? ನಿನ್ನ ಕಾಯಕದ ಈ ಜಿಲ್ಲೆ ಫಲಿತಾಂಶದಲ್ಲಿ ಎಷ್ಟನೇ ಸ್ಥಾನದಲ್ಲಿದೆ? ಹೀಗೆ ಒಂದರ ನಂತರ ಒಂದು ಪ್ರಶ್ನೆ ಕೇಳಿ ಸಾವಿರಾರು ಜನರ ಸಮ್ಮುಖದಲ್ಲೇ ಚಳಿ ಬಿಡಿಸಿದರು.
ಡಿಡಿಪಿಐ ಮಂಜುನಾಥ ಬಗ್ಗೆ ದೂರುಗಳನ್ನು ಕೇಳಿಯೇ ಬಂದವರAತೆ ಕಂಡ ಸಚಿವ ಸೋಮಣ್ಣ, ಕಾರ್ಯಕ್ರಮದ ಆರಂಭದಲ್ಲಿ ಎಲ್ಲಿ ಡಿಡಿಪಿಐ ಎಂದು ಕೇಳಿ ವೇದಿಕೆಯಲ್ಲಿ ಕೂಡಿಸಿದರು.
ಭಾಷಣ ಆರಂಭಿಸುತ್ತಿದ್ದAತೆಯೇ ಜಿಲ್ಲೆ ಅಭಿವೃದ್ಧಿಯ ಚಿತ್ರಣವನ್ನೇ ಬಿಚ್ಚಿಟ್ಟ ಅವರು, ವರ್ಗಕ್ಕಾಗಿ ಕಾಸು ಕೇಳುತ್ತಿಯಂತೆ. ಜಿಲ್ಲೆಯಲ್ಲಿ ಎಷ್ಟು ಶಿಕ್ಷಕರ ಕೊರತೆ ಎಂದು ಕೇಳಿದಾಗ ೩೫೦೦ ಎಂಬ ಉತ್ತರ ಡಿಡಿಪಿಐ ಅವರಿಂದ ಬರುತ್ತಲೇ ಸಿಡಿಮಿಡಿಗೊಂಡು ಕೆಲಸ ಮಾಡುತ್ತಿದ್ದಿಯಾ ಇಲ್ಲವೆ ಟೈಂಪಾಸ್ ಮಾಡುತ್ತಿದ್ದಿಯಾ? ಇಷ್ಟು ಶಿಕ್ಷಕರ ಕೊರತೆ ಇರುವಾಗ ಫಲಿತಾಂಶ ಹೇಗೆ ಹೆಚ್ಚು ಮಾಡುತ್ತಿ? ಗುರುವಾರ ಮಧ್ಯಾಹ್ನವರೆಗೆ ಶಿಕ್ಷಣ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ನನಗೆ ಪೊನ್ ಮಾಡಿಸು. ನಾನೇ ಅವರಿಗೆ ಶಿಕ್ಷಕರನ್ನು ಕೊಡಿ ಎಂದು ಮನವಿ ಮಾಡುವೆ ಎನ್ನುವ ಅಧಿಕಾರಿ ಕಾರ್ಯವೈಖರಿಯನ್ನು ಎಳೆಎಳೆಯಾಗಿ ಬಿಚ್ಚಿಟರು.
ಕೃಷಿ ಅಧಿಕಾರಿಗಳೇ ಎಂದು ಕೂಗಿದಾಗ ಎದ್ದುನಿಂತ ಡಾ.ರಿತೇಂದ್ರನಾಥ ಸೂಗುರ್ ಅವರನ್ನು ನೋಡಿ ಏನು ನಿದ್ದೆ ಮಾಡುತ್ತಿದ್ದೀರಾ? ಜಿಲ್ಲೆಯ ರೈತರ ಅನುಕೂಲಕ್ಕಾಗಿ ಕೆಲಸ ಮಾಡಿ. ಮಣ್ಣು ಪರೀಕ್ಷೆ ಬಗ್ಗೆ ನನಗೆ ತಿಳಿಸಿದ್ದೀರಿ. ಅದ್ಹೇಗೆ ಅಂತ ಮುಂದಿನ ಸಲ ನಾನೇ ನಿಮಗೆ ಹೇಳುತ್ತೇನೆ ಎಂದು ಸಚಿವ ಸೋಮಣ್ಣ ಕ್ಲಾಸ್ ತೆಗೆದುಕೊಂಡರು. ಹೀಗೆ ವಿವಿಧ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಸರಿಯಾಗಿ ಕೆಲಸ ಮಾಡಿ ಎಂದು ಸೂಚಿಸಿದರು.
ಕಾರ್ಯಕ್ರಮಕ್ಕೆ ಬರದ ಒಂದೆರಡು ಇಲಾಖೆ ಅಧಿಕಾರಿಗಳನ್ನು ನನ್ನನ್ನು ಭೇಟಿ ಮಾಡಿಸಿ, ಕೆಲ ವಿಷಯಗಳು ಹೇಳಬೇಕಿದೆ ಎಂದು ಡಿಸಿಗೆ ತಾಕೀತು ಮಾಡಿದರು. ಡಿಸಿ ಸುಶೀಲಮ್ಮ ಜಿಲ್ಲೆಯ ಅಭಿವೃದ್ಧಿ ಕನಸು ಕಂಡAಥವಳು ಅನಿಸುತ್ತಿದೆ. ನೋಡು ತಾಯಿ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಇದು. ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ದೂರದೃಷ್ಟಿಯ ಮಹತ್ವಾಕಾಂಕ್ಷಿ ಜಿಲ್ಲೆಯ ಕನಸು ನನಸಾಗಿಸುವತ್ತ ಕೆಲಸ ಮಾಡಿ ಎಂದು ಸೋಮಣ್ಣ ಹೇಳಿದರು.
ನಂತರ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಲಜೀವನ ಮಿಷನ್, ಜಲಧಾರೆ ಯೋಜನೆಗಳ ಸಮರ್ಪಕ ಜಾರಿಗೆ ತರುವಂತೆ ಸೂಚಿಸಿದರು. ಜಿಲ್ಲೆಯ ಎರಡು ದಿನದ ಭೇಟಿ ಕೊನೆಯಲ್ಲಿ ಯಾದಗಿರಿ ರೈಲು ನಿಲ್ದಾಣ ಪರಿಶೀಲಿಸಿ ಅಗತ್ಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಕೆಲಹೊತ್ತು ಸಭೆ ನಡೆಸಿ ಚರ್ಚಿಸಿದರು.