ಬೈಲಹೊಂಗಲದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಉದ್ಯಮಿ ವಿಜಯ ಮೆಟಗುಡ್ಡ ನೇತೃತ್ವದಲ್ಲಿ ಬಡ ಜನರಿಗೆ ಆಹಾರ ಧಾನ್ಯ ವಿತರಿಸಲಾಯಿತು. ಗುರು ಮೆಟಗುಡ್ಡ, ಸುಭಾಸ ತುರಮರಿ, ದಯಾನಂದ ಫರಾಳಶೆಟ್ಟರ, ಶಿವಾನಂದ ಬಡ್ಡಿಮನಿ, ಆನಂದ ತುರಮರಿ, ಕುಮಾರ ನಾಗನೂರ ಇತರರು ಇದ್ದರು. 
ಜಿಲ್ಲೆ

ಜನರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ

ಬೈಲಹೊಂಗಲ: ಕ್ಷೇತ್ರದಾದ್ಯಂತ ಬಿಜೆಪಿ ನೇತೃತ್ವದಲ್ಲಿ ಬಡ ಜನತೆಯ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ. ಮಹಾಮಾರಿ ಕರೊನಾ ಹಾವಳಿ ಇಳಿಮುಖವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇನ್ನೂ ಸ್ವಲ್ಪ ದಿನ ಎಲ್ಲರೂ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸೇವೆಯೇ ಸಂಘಟನೆ ಅಭಿಯಾನದ ಪ್ರಯುಕ್ತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯಶಸ್ವಿಯಾಗಿ ಏಳು ವರ್ಷ ಪೂರೈಸಿದ ಸವಿನೆನಪಿಗಾಗಿ ದೊಡ್ಡಕೆರೆಯ ಹತ್ತಿರದ ಸಿಖ್ ಹಾಗೂ ಬಡ ಸಮುದಾಯದ ನಿವಾಸಿಗಳಿಗೆ ಬಿಜೆಪಿ ಪಕ್ಷದ ವತಿಯಿಂದ ಆಹಾರ ಹಾಗೂ ದಿನಬಳಕೆ ವಸ್ತುಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಎದುರಾದ ಸಂಕಷ್ಟವನ್ನು ಧೈರ್ಯದಿಂದ ಎದುರಿಸಿ ಕರೊನಾ ಹೊಡೆದೋಡಿಸೋಣ ಎಂದರು.

ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರ್ಧಾರಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಕೊಂಡಾಡಿದೆ. ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್ಡ, ಬಿಜೆಪಿ ಮಂಡಲ ಉಪಾಧ್ಯಕ್ಷ ಸುಭಾಸ ತುರಮರಿ, ಮಾಧ್ಯಮ ವಕ್ತಾರ ದಯಾನಂದ ಫರಾಳಶೆಟ್ಟರ, ಶಿವಾನಂದ ಬಡ್ಡಿಮನಿ, ಆನಂದ ತುರಮರಿ, ಗೀತಾ ಮೆಟಗುಡ್ಡ, ಕುಮಾರ ನಾಗನೂರ, ಪುಟ್ಟು ಯಡಳ್ಳಿ , ಮಡಿವಾಳಪ್ಪ ಯರಝರ್ವಿ, ಜಗದೀಶ ಲೋಕಾಪುರ, ಕಿರಣ ಬೊಂಗಾಳೆ, ದೇವರಾಜ ಕಡಕೋಳ, ಪುರಸಭೆ ಸದಸ್ಯ ಸಾಗರ ಬಾವಿಮನಿ, ಬಸವರಾಜ ಯಾಸಣ್ಣವರ ಇದ್ದರು.