ಚಾಮರಾಜನಗರ: ನಗರದ 23ನೇ ವಾರ್ಡ್‌ನಲ್ಲಿ ಬೂತ್ ವಿಜಯ ಅಭಿಯಾನಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಶನಿವಾರ ಚಾಲನೆ ನೀಡಿದರು.
ವಾರ್ಡ್ ಸದಸ್ಯ ಗಾಯತ್ರಿ ಚಂದ್ರಶೇಖರ್ ಅವರ ನಿವಾಸದ ಮೇಲೆ ಬಿಜೆಪಿ ಬಾವುಟ ಹಾರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಬೂತ್ ಅಭಿಯಾನ ರಾಜ್ಯಾದ್ಯಂತ ಜ.2ರಿಂದ ಜ 12ರವರೆಗೆ ನಡೆಯಲಿದೆ. ಪ್ರತಿಯೊಬ್ಬ ಕಾರ್ಯಕರ್ತ ತಮ್ಮ ಸುತ್ತಮುತ್ತ ಬೂತ್ ಸಮಿತಿ ರಚಿಸುವುದರ ಜತೆಗೆ ಅವರ ಮನೆ ಮೇಲೆ ಪಕ್ಷದ ಧ್ವಜ ಹಾರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗಳನ್ನು ಜನತೆ ತಿಳಿಸುವ ಮೂಲಕ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ಶ್ರಮಿಸಬೇಕು ಎಂದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀಪ್ರತಾಪ್, ಕಾರ್ಯದರ್ಶಿ ಪದ್ಮ, ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ಅಭಿಯಾನದ ಸಂಚಾಲಕರಾದ ಮಹದೇವನಾಯಕ, ಸುರೇಶ್ ನಾಯಕ, ಶಿವು ರಾಮಸಮುದ್ರ, ಮಹೇಶ್, ವಾರ್ಡ್‌ನ ಬೂತ್ ಅಧ್ಯಕ್ಷರಾದ ರಾಧಕೃಷ್ಣ, ಕುಮಾರ್ ಮಾರ್ಕೆಟ್, ಶಶಿರೇಖಾ, ಅನ್ನಪೂರ್ಣ, ಎಸ್‌ಬಿಎಂ ಬ್ಯಾಂಕ್ ಪ್ರಸಾದ್, ಶ್ರೀನಿವಾಸ್ , ಕಿಟ್ಟಿ, ಶಿವಪ್ಪ, ಕೇಬಲ್ ರಂಗಸ್ವಾಮಿ, ಆನಂದ್ ಭಗೀರಥ್ ಇತರರು ಹಾಜರಿದ್ದರು.