ಮುಂಡರಗಿಯ ಗುರುಭವನದಲ್ಲಿ ರಾಜ್ಯಸರ್ಕಾರಿ ನೌಕರರ ಸಂಘ ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಆಶಪ್ಪ ಪೂಜಾರಿ, ನಾಗರಾಜ ಹಳ್ಳಿಕೇರಿ, ಟಿ. ರಾಜೇಶ ಇತರರಿದ್ದರು. 
ಜಿಲ್ಲೆ

ಜನರಿಗೆ ತ್ವರಿತ ಸೇವೆ ನೀಡಿ

ಮುಂಡರಗಿ: ಸರ್ಕಾರಿ ನೌಕರರು ಜನರಿಗೆ ತ್ವರಿತವಾಗಿ ಸೇವೆ ನೀಡಬೇಕು. ನೌಕರರ ಸಂಘ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಹಕರಿಸಬೇಕು. ತಾಲೂಕು ಘಟಕ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಹಸೀಲ್ದಾರ್ ಆಶಪ್ಪ ಪೂಜಾರಿ ಹೇಳಿದರು.

ಪಟ್ಟಣದ ಗುರುಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಶನಿವಾರ ಆಯೋಜಿಸಿದ್ದ ಸದಸ್ಯರ ಸಾಮಾನ್ಯ ಸಭೆ, ಅಭಿನಂದನಾ ಸಮಾರಂಭ ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರಾಜೇಶ ಮಾತನಾಡಿ, ಆಧುನಿಕ ಪದ್ಧತಿಗೆ ಹೊಂದಿಕೊಂಡು ಸರ್ಕಾರಿ ನೌಕರರು ಕೆಲಸ ನಿರ್ವಹಿಸುವುದು ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಮಾತನಾಡಿ, ಎಲ್ಲರ ಸಹಕಾರ, ಮಾರ್ಗದರ್ಶನದಲ್ಲಿ ಸಂಘದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ತಾಲೂಕು ಆಡಳಿತ ಹಾಗೂ ತಾಲೂಕು ನೌಕರರ ಸಂಘದಿಂದ ಆ. 5ರಂದು ಮಹಿಳಾ ಹಾಗೂ ಪುರುಷ ಸರ್ಕಾರಿ ನೌಕರರಿಗೆ ಕ್ರೀಡಾಕೂಟ ಆಯೋಜಿಸಲಾಗಿದ್ದು ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

ಬಿಇಒ ಕೆ.ಡಿ. ಬಡಿಗೇರ, ವಿ.ಎಂ. ಹಿರೇಮಠ ಮಾತನಾಡಿದರು. ವೆಂಕಟೇಶಮೂರ್ತಿ ಟಿ.ಸಿ., ಬಸವರಾಜ ಬೆನಹಾಳ, ಸುವರ್ಣ ಕೋಟಿ, ಎ.ಯು. ಬಗಲಿ, ಗಂಗಾಧರ ಅಣ್ಣಿಗೇರಿ, ಉಮೇಶ ಸಜ್ಜನರ, ಎಂ.ಎಚ್. ಸವದತ್ತಿ, ಎಸ್.ಎನ್. ಡೋಣಿ, ಎ.ಡಿ. ಬಂಡಿ, ರವಿನಾಯಕ ಎಲ್.ಟಿ., ಭರತೇಶ ಬಿ., ಮಹಾಂತೇಶ ಹಲವಾಗಲಿ, ಎಸ್.ಎಸ್. ಬಿಚ್ಚಾಲಿ, ಎಂ.ಆರ್. ಕುಲಕರ್ಣಿ, ಎಂ.ಪಿ. ಶೀರನಹಳ್ಳಿ, ಮಹಾಂತೇಶ ಖೋತ್ ಮೊದಲಾದವರು ಇದ್ದರು. ವಿ.ವಿ. ದಿಬ್ಬದಮನಿ, ಶ್ರೀಕಾಂತ ಅರಹುಣಸಿ, ಶಂಕರ ಸರ್ವದೆ ವಂದಿಸಿದರು.