ಜಿಲ್ಲೆ

ಜನರಲ್ಲಿ ಜಾಗೃತಿಗಾಗಿ ಜೀವನ ಮುಡಿಪು

ಕಂಪ್ಲಿ: ಪಟ್ಟಣದ ಗುರುಮಠದಲ್ಲಿ ಶಿವಾನುಭವಿ ಓದ್ಸೋ ಕರಿಬಸಯ್ಯ ಅವರ 63ನೇ ಪುಣ್ಯಸ್ಮರಣೋತ್ಸವ ಸೋಮವಾರ ನಡೆಯಿತು.

ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ನಿವೃತ್ತ ಪ್ರಾಚಾರ್ಯ ಎಂ.ಎಸ್ ಶಶಿಧರಶಾಸ್ತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದಲ್ಲಿ ಶಿವಾನುಭವ ಪ್ರವಚನ, ಪುರಾಣ ಸಂಸ್ಕೃತಿ ಆರಂಭಿಸುವಲ್ಲಿ ಕರಿಬಸಯ್ಯ ಪ್ರಮುಖರಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಮಹತ್ವವನ್ನು ಜನತೆಯಲ್ಲಿ ಜಾಗೃತಿಗೊಳಿಸಲು ಜೀವನ ಮುಡಿಪಿಟ್ಟಿದ್ದರು ಎಂದರು.

ಗಂಗಾವತಿಯ ಮೇಘಾ ಆರ್.ಬಿ ನೂಲ್ವಿ ವಚನ ಗಾಯನ, ಭಕ್ತಿಗೀತೆ, ಸುಗಮ ಸಂಗೀತ ಪ್ರಸ್ತುತಪಡಿಸಿದರು. ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿ ತಬಲಾ, ರಾಮಚಂದ್ರಪ್ಪ ಉಪ್ಪಾರ್ ಕೀಬೋರ್ಡ್ ವಾದನ, ಶಿವಕುಮಾರ್ ಗೆಜ್ಜೆ ತಾಳ ವಾದ್ಯ ನುಡಿಸಿದರು. ಪ್ರಮುಖರಾದ ಗೊಗ್ಗ ಚನ್ನಬಸವರಾಜ, ಗೊಗ್ಗ ಶಾಂತಾ, ಗೊಗ್ಗ ಕಾರ್ತಿಕ್, ಅಮೃತ ಸನತ್ ಕುಮಾರ್, ಎಸ್.ಎಸ್.ಎಂ. ಚನ್ನಬಸವರಾಜ, ಅಯ್ಯೋದಿ ಎಚ್.ಎಂ.ಚನ್ನಬಸವರಾಜ, ಡಾ.ಶಾರದಾ ಜ.ಹಿರೇಮಠ, ಘನಮಠದಯ್ಯ ಹಿರೇಮಠ, ಕಲ್ಗುಡಿ ನಾಗರತ್ನ, ವಾಲಿ ಶಕುಂತಲಾ, ಡಾ.ಕಲ್ಗುಡಿ ಚಂದ್ರಶೇಖರ್, ಬಿ.ಎಂ.ಪುಷ್ಪಾ ರುದ್ರಯ್ಯ ಇತರರಿದ್ದರು.