ಜಿಲ್ಲೆ

ಜನರ ಹಿತಕ್ಕಾಗಿ ದುಡಿದ ಭಗೀರಥ

ಚಾಮರಾಜನಗರ: ಧರಗೆ ಗಂಗೆಯನ್ನು ತರುವಲ್ಲಿ ಶ್ರಮವಹಿಸಿದ ಶ್ರೀಭಗೀರಥರು ಜನರ ಹಿತಕ್ಕಾಗಿ ಶ್ರಮಿಸಿದರು ಎಂದು ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷ ಬಿ.ಕೆ.ರವಿಕುಮಾರ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ಶ್ರೀ ಭಗೀರಥರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸೂರ್ಯ ವಂಶಸ್ಥರ ಮಗನಾಗಿದ್ದ ಭಗೀರಥ ಜಲಕ್ಷಾಮವನ್ನು ಹೋಗಲಾಡಿಲು ಶಿವನ ಕುರಿತು ತಪಸ್ಸು ಕೂರತ್ತಾರೆ. ಭಕ್ತನ ತಪಸ್ಸು ಶಕ್ತಿಯನ್ನು ಪರಿಶೀಲನೆ ಮಾಡುವ ಶಿವನು ಗಂಗೆಯನ್ನು ತನ್ನ ಜಡೆಯಲ್ಲಿ ಕಟ್ಟಿಕೊಂಡಿರುತ್ತಾರೆ. ತನ್ನ ಸತತ ಪ್ರಯತ್ನ ಹಾಗೂ ತಪಸ್ಸಿನ ಶಕ್ತಿಯಿಂದ ಶಿವನ ಜಡೆಯಲ್ಲಿದ್ದ ಗಂಗೆಯನ್ನು ಭೂಮಿಗೆ ತಂದರು. ಅವರು ತೋರಿದ ಶಕ್ತಿ ಅವಿಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಆರ್.ಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ನಲ್ಲೂರು ಸೋಮೇಶ್ವರ್, ಮುಖಂಡರಾದ ಉಡಿಗಾಲ ನಂಜಪ್ಪ, ಸೋಮಣ್ಣ, ನಗರಸಭಾ ಸದಸ್ಯರಾದ ಚಿನ್ನಮ್ಮ, ಕರಿನಂಜನಪುರ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲತಾ ರಾಜಶೇಖರ್, ಜಿ.ಪಂ. ಮಾಜಿ ಸದಸ್ಯೆ ಕಾವೇರಿ ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.