ಅರಸೀಕೆರೆ: ಕ್ಷೇತ್ರದ ಜನರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವೆ ಎಂದು ಸಮಾಜ ಸೇವಕ ಎನ್.ಆರ್.ಸಂತೋಷ್ ಹೇಳಿದರು.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಜೆ.ಸಿ. ಆಸ್ಪತ್ರೆಗೆ ತೆರಳಿ ಭಾನುವಾರ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿ ಬಸವೇಶ್ವರ ವೃತ್ತದಲ್ಲಿ ಅಭಿಮಾನಿಗಳು ಹಾಗೂ ಬೆಂಬಲಿಗರ ಜತೆಗೆ ಕೇಕ್ ಕತ್ತರಿಸಿ ಮಾತನಾಡಿದರು.
ಸಾರ್ವಜನಿಕ ಬದುಕಿನಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಭಗವಂತ ಕರುಣಿಸಿದ್ದಾನೆ. ನೀವೆಲ್ಲರೂ ನನ್ನ ಮೇಲೆ ಇರಿಸಿರುವ ಪ್ರೀತಿ, ಅಭಿಮಾನಕ್ಕೆ ಋಣಿಯಾಗಿದ್ದೇನೆ. ಕಾರ್ಯಕರ್ತರು ಹಾಗೂ ಮುಖಂಡರು ರಾಜಕೀಯ ಹೋರಾಟದಲ್ಲಿ ಎದೆಗುಂದುವ ಅಗತ್ಯವಿಲ್ಲ ಎಂದು ವಿಶ್ವಾಸ ತುಂಬಿದರು.
ನಗರಸಭೆ ಅಧ್ಯಕ್ಷ ಸಿ.ಗಿರೀಶ್, ಮುಖಂಡರಾದ ಬಿ.ಎನ್.ವಿದ್ಯಾಧರ್,ಶಿವನ್‌ರಾಜ್, ಅನಿಲ್, ಪವನ್, ಸುಮಿತ್, ನಾಗರಾಜ್, ಆನಂದ್, ಲೋಕೇಶ್, ರಘು ಸೇರಿ ಹಲವರು ಸಾಥ್ ನೀಡಿದರು.