ಜಿಲ್ಲೆ

ಜನರ ಮನ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ

ಚಿತ್ರದುರ್ಗ: ಜಿಲ್ಲೆಯಲ್ಲಿ ಬಹಳಷ್ಟು ಹೋರಾಟಗಾರರಿದ್ದಾರೆ. ಅದರಲ್ಲಿ ಎಂ.ಜಯಣ್ಣ, ಸದಾನಂದಯ್ಯ, ಟಿ.ನುಲೇನೂರು ಎಂ.ಶಂಕರಪ್ಪ, ಮುರುಘರಾಜೇಂದ್ರ ಒಡೆಯರ್ ಜನರ ಮನದಲ್ಲಿ ಉಳಿದ ಪ್ರಮುಖರಾಗಿದ್ದಾರೆ ಎಂದು ಚಿಂತಕ ಜೆ.ಯಾದವರೆಡ್ಡಿ ಹೇಳಿದರು.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ, ಕೆಕೆಎನ್‌ಎಸ್‌ಎಸ್, ಭ್ರಷ್ಟಾಚಾರ ವಿರೋಧಿ ಸೇನೆಯಿಂದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಮುರುಘರಾಜೇಂದ್ರ ಒಡೆಯರ್ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅವಕಾಶ ವಂಚಿತರ ಧ್ವನಿಯಾಗಿ ಮುರುಘರಾಜೇಂದ್ರ ಒಡೆಯರ್ ಹೋರಾಡಿದರು. ರಾಜಕಾರಣಿ, ಅಧಿಕಾರಿ ಸೇರಿ ಯಾರನ್ನೇ ಆಗಲಿ ಪ್ರಶ್ನಿಸುವ ಧೈರ್ಯ ಉಳ್ಳವರಾಗಿದ್ದರು ಎಂದು ಸ್ಮರಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ, ಒಡೆಯರ್ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದರು. ಕುಟುಂಬದ ಕುರಿತು ಎಂದಿಗೂ ಚಿಂತಿಸಿದವರಲ್ಲ. ನಿಷ್ಠುರವಾದಿ, ಯಾರ ಮುಲಾಜಿಗೂ ಒಳಗಾಗದ ವ್ಯಕ್ತಿತ್ವ ಹೊಂದಿದ್ದರು ಎಂದು ನೆನಪು ಮಾಡಿಕೊಂಡರು.

ರೆವೆರಂಡ್ ಫಾದರ್ ಎಂ.ಎಸ್.ರಾಜು, ವಕೀಲ ಬಿ.ಕೆ.ರಹಮತ್ ಉಲ್ಲಾ, ಸಾಹಿತಿ ಪರಶುರಾಮ್ ಗೊರಪ್ಪರ್, ಟಿ.ತಿಪ್ಪೇಸ್ವಾಮಿ ಸಂಪಿಗೆ, ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್, ಮುಖಂಡರಾದ ಬಿ.ಟಿ.ಜಗದೀಶ್, ಟಿಪ್ಪು ಖಾಸಿಂ ಆಲಿ, ಪಾರ್ಥರಾಜೇಂದ್ರ ಒಡೆಯರ್, ನರೇನಹಳ್ಳಿ ಅರುಣ್‌ಕುಮಾರ್, ಓ.ನರಸಿಂಹಮೂರ್ತಿ, ಎ.ಜಾಕೀರ್ ಹುಸೇನ್ ಇತರರಿದ್ದರು.