ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈರಣ್ಣ ಕಡಾಡಿ, ಅಭಯ ಪಾಟೀಲ ಮಾತನಾಡಿದರು. 
ಜಿಲ್ಲೆ

ಜನರ ಭಾವನೆಗಳ ಜತೆ ಆಟವಾಡುತ್ತಿರುವ ಸಿಎಂ: ಈರಣ್ಣ ಕಡಾಡಿ

ಬೆಳಗಾವಿ: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ಗುಂಡಿನ ದಾಳಿ ಖಂಡಿಸಿ ದೇಶ್ಯಾದ್ಯಂತ ಪ್ರತಿಭಟನೆ, ಪಂಜಿನ ಮೆರವಣಿಗೆ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್​ ಸಮಾವೇಶ ಮಾಡಿರುವ ಉದ್ದೇಶ ಏನು? ಸಿಎಂ ಸಿದ್ದರಾಮಯ್ಯ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಮೇಲೆ ಯುದ್ಧ ಮಾಡಬೇಡಿ ಎಂಬ ಸಿಎಂ ಹೇಳಿಕೆಯು ಪಾಕಿಸ್ತಾನದಲ್ಲಿ ದೊಡ್ಡ ಪ್ರಚಾರ ಪಡೆಯುತ್ತಿದೆ. ಸಂವಿಧಾನ ಉನ್ನತ ಸ್ಥಾನದಲ್ಲಿರುವ ಒಂದು ರಾಜ್ಯದ ಮುಖ್ಯಮಂತ್ರಿ ಶತ್ರು ದೇಶದ ಪರ ಮಾತನಾಡುವುದು ಎಷ್ಟು ಸರಿ? ಕಾಂಗ್ರೆಸ್​ ನಾಯಕರು ಇದಕ್ಕೆ ಸ್ಪಷ್ಟೀಕರಣ ಕೊಡಬೇಕು ಎಂದರು.

ಘೋಷಣೆ ಕೂಗಿದ್ದರಲ್ಲಿ ತಪ್ಪೇನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ದೇಶದ ತುಂಬೆಲ್ಲ ಪ್ರತಿಭಟನೆ ನಡೆಯುತ್ತಿವೆ. ಅವರ ಹೇಳಿಕೆಯಿಂದ ಕೆರಳಿರುವ ಜನರು ಸಮಾವೇಶದಲ್ಲಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಿಪಡಿಸಿ ೂಷಣೆ ಕೂಗಿದ್ದಾರೆ. ಅದರಲ್ಲಿ ತಪ್ಪೇನಿದೆ?. ರಾಜ್ಯ ಸರ್ಕಾರ ಜನರ ಭಾವನೆಗಳಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ಪಾಕಿಸ್ತಾನದ ಮೇಲೆ ಯುದ್ದ ಮಾಡಬೇಡಿ ಎಂಬ ಸಿಎಂ ಹೇಳಿಕೆ ಸರಿಯಿದ್ದರೆ ಬಿಜೆಪಿ ಕಾರ್ಯಕರ್ತೆಯರು ಕಾಂಗ್ರೆಸ್​ ಸಮಾವೇಶದಲ್ಲಿ ೂಷಣೆ ಕೂಗಿದ್ದ ಸರಿ ಇದೆ. ಅವರು ಮಾಡಿದ್ದು ತಪ್ಪು ಎಂದು ಹೇಳಿದರೆ ನಮ್ಮ ಮಾಡಿದ್ದು ತಪ್ಪು ಎಂದು ನಾವು ಒಪ್ಪಿಕೊಳ್ಳುತ್ತೇವೆ. ಸಿಎಂ ಸ್ಥಾನದಲ್ಲಿರುವ ವ್ಯಕ್ತಿ ಶತ್ರು ದೇಶದ ಪರ ಮಾತನಾಡುತ್ತಾರೆ ಎಂದರೆ ಏನು ಅರ್ಥ? ಸಿಎಂ ವಿರುದ್ಧ ಎಲ್ಲ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಯೊಬ್ಬರ ಭಾರತಿಯನಿಗೆ ರಕ್ತ ಕುದಿಯುತ್ತದೆ. ಇದೇ ಆಕ್ರೋಶದಲ್ಲಿ ಮಹಿಳಾ ಕಾರ್ಯಕರ್ತೆಯರು ಸಮಾವೇಶದಲ್ಲಿ ಸಿಎಂ ವಿರುದ್ಧ ೂಷಣೆ ಕೂಗಿದ್ದಾರೆ ಎಂದು ಸಮರ್ಥಿಸಿಕೊಂಡರು.

ರಾಜ್ಯ ಸರ್ಕಾರವು ಮಹಿಳೆಯರು, ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸಿ ಹೆದರಿಸಿ, ಬೆದರಿಸಿ ಕೆಲಸ ಮಾಡುತ್ತಿದೆ. ಇದಕ್ಕೆಲ್ಲ ಬಿಜೆಪಿ ಹೆದರುವುದಿಲ್ಲ. ಮಹಿಳೆಯರನ್ನು ನ್ಯಾಯಯುತವಾಗಿ ಬಿಡುಗಡೆಗೊಳಿಸಿದರೆ ಸಮಸ್ಯೆ ಇತ್ಯರ್ಥವಾಗುತ್ತದೆ. ಇಲ್ಲದಿದ್ದರೆ 10 ಸಾವಿರ ಮಹಿಳೆಯರು ಸೇರಿ ಬೆಳಗಾವಿ ಬಂದ್​ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.