ಜಿಲ್ಲೆ

ಜನರ ಭಾಗವಹಿಸುವಿಕೆಗೆ ವಾರ್ಡ್ ಸಮಿತಿ

ಕಲಬುರಗಿ: ವಾರ್ಡ್ ಸಮಿತಿ ರಚನೆಯಿಂದ ಸ್ಥಳೀಯ ಮಟ್ಟದಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಾಗಿ ಉತ್ತಮ ಅಭಿವೃದ್ಧಿ ಕೆಲಸಗಳಾಗುತ್ತವೆ ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ್ ಹೇಳಿದರು.
ಮಿಸ್ಬಾ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಜನಾಗ್ರಹ ಸಿಟಿಜನ್ಶಿಪ್ ಆ್ಯಂಡ್ ಡೆಮಾಕ್ರಸಿ ಸಂಸ್ಥೆ ಸಿದ್ಧಪಡಿಸಿದ `ನನ್ನ ನಗರ ನನ್ನ ಜವಾಬ್ದಾರಿ' ಸಕ್ರಿಯ ನಾಗರಿಕತ್ವದ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮಹಾನಗರ ಪಾಲಿಕೆ ಸದಸ್ಯೆ ಶಾಂತಾಬಾಯಿ ಮಾತನಾಡಿ, ವಾರ್ಡ್ ಸಮಿತಿಗಳ ರಚನೆಯಿಂದ ವಾರ್ಡ್ಗಳ ಅಭಿವೃದ್ಧಿ ಜತೆಗೆ ನಮ್ಮದೇ ಆದ ನಾಗರಿಕರ ಪಡೆ ರಚನೆಯಾಗಲಿದೆ. ವಾರ್ಡ್ನ ಪ್ರತಿ ಮನೆಗೆ ತಲುಪಿಸಿ, ಸಮಸ್ಯೆಗಳನ್ನು ಪರಿಹರಿಸಲು ಸಮಿತಿ ಪೂರಕವಾಗಲಿದೆ ಎಂದರು.
ಸಮಿತಿ ರಾಜ್ಯ ಮುಖ್ಯಸ್ಥ ಮಂಜುನಾಥ ಹಂಪಾಪುರ ಎಲ್.ಮಾತನಾಡಿ, ವಾರ್ಡ್ ಸಮಿತಿ ಸಕ್ರಿಯ ನಾಗರಿಕರೆಡೆಗೆ ಕೊಂಡೊಯ್ಯುವ ಸಾಧನವಾಗಿದೆ. ಕಲಬುರಗಿಯ ನಾಗರಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಹಜ್ರತ್ ಸೈಯದ್ ಅಲಿ ಅಕ್ಬರ್ ಹುಸೇನಿ, ಅಲ್ಲಮಾರುಫ್ ಸಾಬೀರ್ ಹುಸೇನಿ, ವಾರ್ಡ್ ಸಮಿತಿ ಬಳಗ ಸಂಚಾಲಕ ಮೋದಿನ್ ಪಟೇಲ್ ಅಣಬಿ, ಸಂಯೋಜಕ ಮಂಜುನಾಥ ಮೋಕಾಶಿ, ಉದ್ಯಮಿ ನೀಲಕಂಠರಾವ ಮೂಲಗೆ, ಪತ್ರಕರ್ತ ಅಜೀಜ್ ಉಲ್ಲಾ ಸರ್ಮಸ್ತ, ಮಾಜಿ ಮೇಯರ್ ಸಜ್ಜಾದ್ ಅಲಿ ಇನಾಮದಾರ, ಹುಲಿಗೆಪ್ಪ ಕನಕಗಿರಿ, ನಜಿರೋದ್ದಿನ್ ಮೂತವಲ್ಲಿ, ಡಾ.ಗೌಸುದ್ದೀನ್, ಅಸ್ಲಾಂ ಬಾಜೆ, ಸಂಜೀವ ಕುಮಾರ ಡೊಂಗರಗಾವ, ಡಾ.ರಾಜಶೇಖರ ಕಟ್ಟಿಮನಿ, ಖಾಜಾ ಗೇಸುದರಾಜ, ಸಹಾರ ಭಾನು, ಶೈಖ್ ಸಮ್ರಿನ್, ರಾಜಶೇಖರ ಮಾಂಗ್, ರಾಜಶೇಖರ ಬಿರಾದಾರ, ಸತೀಶ ಮಾಲಗಿತ್ತಿ, ನಾಗರಾಜ ಮೂಲಗಿ, ಬಸವರಾಜ ಗಂಜಿ ಇತರರಿದ್ದರು.