ಜಿಲ್ಲೆ

ಜನರ ಬೇಡಿಕೆಯಂತೆ ರೈಲ್ವೆ ಸೌಲಭ್ಯ

ಹುಮನಾಬಾದ್: ಬೀದರ್ ಜಿಲ್ಲೆಗೆ ಅಭಿವೃದ್ಧಿಯ ಸ್ಪರ್ಷ ನೀಡುತ್ತಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್ ಯಶ್ವಂತಪುರ ರೈಲ್ವೆ ಆರಂಭಿಸಿದ್ದು, ಹುಮನಾಬಾದ್ ಮಾರ್ಗವಾಗಿ ಸಂಚರಿಸುತ್ತಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೀದರ್ - ಯಶವಂತಪುರ ನೂತನ ರೈಲಿಗೆ ಸ್ವಾಗತಿಸಿ ಮಾತನಾಡಿ, ಬಿಜೆಪಿ ಸೇರ್ಪಡೆಯಾದಾಗ ರೈಲ್ವೆಗೆ ಮನವಿ ಮಾಡಿದ್ದೆ. ಜನರ ಬೇಡಿಕೆಯಂತೆ ಚಾಲನೆ ದೊರಕಿದೆ. ಕೇಂದ್ರದ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಹಲವು ಅಭಿವೃದ್ಧಿ ಕೈಗೊಂಡಿದ್ದು, ಜಗತ್ತೇ ಭಾರತದತ್ತ ನೋಡುವಂತೆ ಮಾಡಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಹುಮನಾಬಾದ್‌ನಿಂದ ಹೈದರಾಬಾದ್‌ಗೂ ರೈಲ್ವೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಜನರ ಬೇಡಿಕೆಯಂತೆ ರೈಲ್ವೆ ಆರಂಭಿಸಲಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರಿಗೆ ವಿದ್ಯುತ್ ಪೂರೈಸುತ್ತಿಲ್ಲ. ಇದರ ಶಾಪ ತಟ್ಟಲಿದೆ ಎಂದರು.

ಇಲಾಖೆ ಅಧಿಕಾರಿಗಳಾದ ಬಸವರಾಜ, ಶ್ರೀನಿವಾಸ, ಪ್ರಮುಖರಾದ ಅಭಿಮನ್ಯು ನಿರಗುಡೆ, ಪ್ರಭಾಕರ ನಾಗರಾಳೆ, ಮಲ್ಲಿಕಾರ್ಜುನ ಕುಂಬಾರ, ವಿಶ್ವನಾಥ ಪಾಟೀಲ್, ಸಂತೋಷ ಪಾಟೀಲ್, ಸುನೀಲ, ಗಿರೀಶ ತುಂಬಾ, ಕೆ.ಎಂ.ಗಜೇAದ್ರ, ರವಿ ಹೊಸಳ್ಳಿ, ಶ್ರೀನಾಥ ದೇವಣಿ, ರಾಜರಡ್ಡಿ, ನಾಗಭೂಷಣ ಸಂಗಮಕರ, ಇಲಿಯಾಸ್‌ಖಾನ್, ಡಿ.ಎನ್.ಪತ್ರಿ ಇತರರಿದ್ದರು.