ಚಿತ್ರದುರ್ಗ: ಮುರುಘಾಮಠ, ಮುರುಘಾ ಪರಂಪರೆ ಶ್ರೀಗಳ ಆಶೀರ್ವಾದ, ಜನರ ಪ್ರೀತಿ-ವಿಶ್ವಾಸ ಕಾರಣಕ್ಕೆ ಸಂದ ಗೌರವವೇ ಡಾಕ್ಟರೇಟ್ ಪದವಿ ಎಂದು ಬಾಪೂಜಿ ಸಮೂಹ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ತಿಳಿಸಿದರು.
ಜಿಲ್ಲಾ ಬೇಡ ಜಂಗಮ ಸಮಾಜದಿಂದ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಎಸ್‌ಜೆಎಂ ವಿದ್ಯಾಪೀಠದಲ್ಲಿ ಸೇವೆ, ಬಾಪೂಜಿ ಸಮೂಹ ಸಂಸ್ಥೆಯಡಿ ಅಂಗವಿಕಲರ ಶಾಲೆ, ಪ್ರಾಥಮಿಕ, ಪ್ರೌಢಶಾಲೆ, ಪಾಲಿಟೆಕ್ನಿಕ್, ಸಿಪಿಎಡ್ ಕಾಲೇಜು ಸ್ಥಾಪಿಸಿದ್ದೇನೆ. ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ ಎಂದರು.
ಜಿಲ್ಲಾ ಬೇಡ ಜಂಗಮ ಸಮಾಜದ ಅಧ್ಯಕ್ಷ ಎಂ.ಟಿ.ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಷಡಾಕ್ಷರಯ್ಯ, ಖಜಾಂಚಿ ಕೆ.ಎಸ್.ಶಿವನಗೌಡರು, ತಾಲೂಕು ಅಧ್ಯಕ್ಷ ಕಲ್ಲೇಶಯ್ಯ, ವಕೀಲ ಕೆ.ಎನ್.ವಿಶ್ವನಾಥ್, ಸಿ.ಎಂ.ವೀರಣ್ಣ, ನಾಗೇಂದ್ರಯ್ಯ, ಡಾ.ಪ್ರಭುದೇವ, ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ವಿಜಯಕುಮಾರ್, ಬಿ.ಎಂ.ಶರಣಯ್ಯ, ಶಿವರಾಜ್ ಇತರರಿದ್ದರು.