ರಾಮದುರ್ಗದ ಸಿ.ಎಸ್. ಬೆಂಬಳಗಿ ಮಹಾವಿದ್ಯಾಲಯದಲ್ಲಿ ತಾಲೂಕು ಕಸಾಪ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ರಾಣಿ ಚನ್ನಮ್ಮ ವಿವಿ ಸಿಂಡಿಕೇಟ್ ಸದಸ್ಯೆ ಡಾ. ನಿರ್ಮಲಾ ಬಟ್ಟಲ ಮಾತನಾಡಿದರು. ಪಾಂಡುರಂಗ ಜಟಗನ್ನವರ, ಡಾ.ಎಚ್.ಪಿ. ಹಾಲೋಳ್ಳಿ, ಪ್ರೊ.ಎಸ್.ಎಂ. ಸಕ್ರಿ, ಡಾ.ಎಸ್.ಬಿ.ಸಂಗಮ, ರಮೇಶ ಬಿಕ್ಕನ್ನವರ ಇದ್ದರು. 
ಜಿಲ್ಲೆ

ಜನರ ಎಚ್ಚರಿಸುವಂತೆ ಕವನ ರಚನೆಯಾಗಲಿ

ರಾಮದುರ್ಗ: ಕವಿ ಹದಯಗಳು ತಮ್ಮ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಜನತೆಯನ್ನು ಎಚ್ಚರಿಸುವ ರೀತಿಯಲ್ಲಿ ಕೃತಿಗಳನ್ನು ರಚಿಸಬೇಕು. ಕವನಗಳು ಯಾರ ಸ್ವತ್ತು ಅಲ್ಲ. ಕವಿ ಹದಯ ಹೊಂದಿದವರು ಕವನ ರಚಿಸಲು ಸಾಧ್ಯ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ. ನಿರ್ಮಲಾ ಬಟ್ಟಲ ಹೇಳಿದರು.

ಪಟ್ಟಣದ ಸಿ.ಎಸ್. ಬೆಂಬಳಗಿ ಮಹಾವಿದ್ಯಾಲಯದಲ್ಲಿ ಕಸಾಪ, ಕರ್ನಾಟಕ ಸಂಘ ಹಾಗೂ ಕಾಲೇಜಿನ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾವ, ರಸ, ಚಿಂತನಾಶೀಲ ತುಂಬಿದ ಸಾಮರ್ಥ್ಯ ಪ್ರತಿಯೊಬ್ಬರಲ್ಲಿದೆ. ಭಾವನೆಗಳನ್ನು ಪದಗಳನ್ನಾಗಿ ಜೋಡಿಸುವ ಸಜನಾತ್ಮ ಕಲೆಯಿಂದ ಕವನ ರಚಿಸಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಮಾತನಾಡಿ, ಎಲ್ಲ ಬಗೆಯ ಕವಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕವನ ವಾಚನಕ್ಕೆ ಕವಿಗೋಷ್ಠಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಕಸಾಪ ಮೂಲಕ ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಡಾ.ಎಚ್.ಪಿ. ಹಾಲೋಳ್ಳಿ ಆಶಯ ನುಡಿಗಳನ್ನಾಡಿದರು. ಜಿಲ್ಲೆಯಾದ್ಯಂತ 30 ಕವಿಗಳು ಕವಿಗೋಷ್ಠಿಯಲ್ಲಿ ತಮ್ಮ ಕವನ ವಾಚಿಸಿದರು. ಪ್ರಾಚಾರ್ಯ ಪ್ರೊ.ಎಸ್.ಎಂ. ಸಕ್ರಿ, ಡಾ.ಎಸ್.ಬಿ.ಸಂಗಮ, ರಮೇಶ ಬಿಕ್ಕನ್ನವರ, ಕಲ್ಲಪ್ಪ ಪೂಜೇರ, ಐಕ್ಯೂಎಸಿ ಸಂಯೋಜಕ ಡಾ. ಪ್ರಕಾಶ ತೆಗ್ಗಿಹಳ್ಳಿ, ಡಾ. ಪಿ.ಎಂ.ಸಿಂಗಾರಕೊಪ್ಪ, ಕಸಾಪ ಗೌರವ ಕೋಶಾಧ್ಯಕ್ಷ ಸುರೇಶ ಹುಚ್ಚನ್ನವರ ಇತರರು ಇದ್ದರು.