ಚಿಕ್ಕೋಡಿ ಸಮೀಪದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು. ರಾಹುಲ ದೇಸಾಯಿ, ಅನಿಲ ಪಾಟೀಲ, ಶಶಿಕಾಂತ ಪಾಟೀಲ, ಸಂಜು ಪಾಟೀಲ ಇತರರಿದ್ದರು. 
ಜಿಲ್ಲೆ

ಜನರ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿ

ಚಿಕ್ಕೋಡಿ ಬೆಳಗಾವಿ:
ಗ್ರಾಮಸ್ಥರಿಗೆ ಅನುಕೂಲವಾಗಲೆಂದು ಯಡೂರ ಬ್ರಿಡ್ಜ್​ನಿಂದ ಚಂದೂರ ಟೇಕ್​ ವರೆಗೆ 3 ಕೋಟಿ ವೆಚ್ಚದ ರಸ್ತೆ ಸುಧಾರಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದರು.

ಸಮೀಪದ ಚಂದೂರ ಟೇಕ್​ದಲ್ಲಿ ಶುಕ್ರವಾರ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಸುಧಾರಣೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಅವರ ಆಶಯದಂತೆ 5.6 ಕಿಮೀ ರಸ್ತೆ ಸುಧಾರಣೆ ಮಾಡಲಾಗುತ್ತಿದೆ ಎಂದರು.

ಕರೊನಾದಿಂದ ರಾಜ್ಯ ಸರ್ಕಾರದಲ್ಲಿ ಉಂಟಾದ ಆರ್ಥಿಕ ಸಮಸ್ಯೆಯಿಂದ ಅಭಿವೃದ್ಧಿ ಕೆಲಸಗಳಾಗಿರಲಿಲ್ಲ. ಸದ್ಯ ನಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿದ ಪರಿಣಾಮ ೇತ್ರದ ಅನೇಕ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷ ರಾಹುಲ ದೇಸಾಯಿ, ಕಾಂಗ್ರೆಸ್​ ನಾಯಕ ಅನಿಲ ಪಾಟೀಲ, ಶಶಿಕಾಂತ ಪಾಟೀಲ, ಸಂಜು ಪಾಟೀಲ, ತೇಜು ಪಾಟೀಲ, ಭೀಮಗೌಡ ಪಾಟೀಲ, ಮಹೇಶ ಕಾಗವಾಡೆ, ಶಿವಾನಂದ ಕರೋಶಿ, ಪಾಂಡು ಕೋಳಿ, ಸುಭೋದ ಜೋಶಿ, ದಾದಾ ನರವಾಡೆ, ಬಾಬು ಉಮರಾಣಿ, ಶ್ರೀನಾಥ ಪಾಟೀಲ ಇತರರಿದ್ದರು.