ಜಿಲ್ಲೆ

ಜನಮಾನಸದಲ್ಲಿ ಉಳಿಯುವ ಕೆಲಸಗಳಾಗಲಿ

ಮಳವಳ್ಳಿಯ ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ವೆಂಕಟರಾಮು ಉದ್ಘಾಟಿಸಿದರು. ಡಾ.ಕೆ.ಅನ್ನದಾನಿ, ಬಿ.ಸೋಮಶೇಖರ್, ಯಮದೂರು ಸಿದ್ದರಾಜು, ಎಚ್.ಎಸ್.ಮುದ್ದೇಗೌಡ, ಸಿದ್ದರಾಮಯ್ಯ, ಕೌಡ್ಲೆ ಚನ್ನಪ್ಪ, ಕೃಷ್ಣೇಗೌಡ ಹುಸ್ಕೂರು, ರಂಗಸ್ವಾಮಿ ಬೆಳಕವಾಡಿ, ಕುಮಾರಸ್ವಾಮಿ ದೋರನಹಳ್ಳಿ, ಚೊಟ್ಟನಹಳ್ಳಿ ರಮೇಶ್ ಇದ್ದರು.

ಮಳವಳ್ಳಿ: ಮನುಷ್ಯನ ಹುಟ್ಟು-ಸಾವು ಸ್ವಾಭಾವಿಕ. ಆದರೆ ಯಾವುದೇ ವ್ಯಕ್ತಿ ಸಾವಿನ ನಂತರವೂ ಜನಮಾನಸದಲ್ಲಿ ಉಳಿಯಬೇಕಾದರೆ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.


ಪಟ್ಟಣದ ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ ವತಿಯಿಂದ ಶನಿವಾರ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಪುತ್ಥಳಿ ಅನಾವರಣ ಹಾಗೂ ಬಿಇಡಿ ಕಾಲೇಜು ಹೆಚ್ಚುವರಿ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.


ಯಾವುದೇ ಉನ್ನತ ಹುದ್ದೆ ಅಥವಾ ರಾಜಕೀಯವಾಗಿ ಅವಕಾಶ ಕೂಡಿ ಬಂದಾಗ ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡು ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡಬೇಕು ಎಂದರು.


ರಾಜಕೀಯ ಸಾಧನೆಗಿಂತ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ತೃಪ್ತಿ ಒದಗಲಿದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸು ವುದರಿಂದ ನೂರಾರು ಸಾಧಕರನ್ನು ಸಮಾಜಕ್ಕೆ ನೀಡಬಹುದು ಎಂದರು.


ಆರ್‌ಎಸ್‌ಎಸ್ ಕಾರ್ಯಕಾರಿ ಸಮಿತಿ ಸದಸ್ಯ ವೆಂಕಟರಾಮು , ಮಾಜಿ ಸಚಿವ ಬಿ.ಸೋಮಶೇಖರ್, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಯಮದೂರು ಸಿದ್ದರಾಜು ಮಾತನಾಡಿದರು. ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಚ್.ಎಸ್.ಮುದ್ದೇಗೌಡ, ಬಿಜೆಪಿ ಮುಖಂಡ ಸಿದ್ದರಾಮಯ್ಯ, ಕೌಡ್ಲೆ ಚನ್ನಪ್ಪ, ಕೃಷ್ಣೇಗೌಡ ಹುಸ್ಕೂರು, ರಂಗಸ್ವಾಮಿ ಬೆಳಕವಾಡಿ, ಕುಮಾರಸ್ವಾಮಿ ದೋರನಹಳ್ಳಿ, ಚೊಟ್ಟನಹಳ್ಳಿ ರಮೇಶ್ ಇತರರು ಹಾಜರಿದ್ದರು.