ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಘರಾಣೆಯ ಸಂಸ್ಥಾಪಕ ಸಿತಾರ್ ರತ್ನ ರಹಿಮತ್ ಖಾನ್‌ರ 70ನೇ ಪುಣ್ಯತಿಥಿ ಅಂಗವಾಗಿ ನಗರದ ಡಾ. ಅಣ್ಣಾಜಿರಾವ್ ಸಿರೂರ ಸೃಜನಾ ರಂಗಮ0ದಿರದಲ್ಲಿ ಆಯೋಜಿಸಿರುವ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮುಂಬೈನ ವಿದುಷಿ ಅಶ್ವಿನಿ ಭಿಡೆ ಅವರಿಗೆ 2024ನೇ ಸಾಲಿನ ಉಸ್ತಾದ್ ಬಾಲೇಖಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ. ರಮಾಕಾಂತ ಜೋಶಿ, ರಾಘವೇಂದ್ರ ಆಯಿ, ಡಾ. ವೆಂಕಟೇಶ ಕುಮಾರ, ಛೋಟೆ ರೆಹಮತ್ ಖಾನ್, ಇತರರಿದ್ದರು.
ಪ್ರಶಸ್ತಿ ಪುರಸ್ಕೃತ ವಿದುಷಿ ಅಶ್ವಿನಿ ಭಿಡೆ ಅವರು ಜೈಪುರ ಅತ್ರೌಲಿ ಘರಾಣೆಯ ಬಿಹಾಗಡಾ ರಾಗದೊಂದಿಗೆ ಗಾಯನಕ್ಕೆ ಮುನ್ನುಡಿ ಬರೆದರು. ವಿಲಂಬಿತ್ ಏಕತಾಲದಲ್ಲಿ `ನವೇಲಿ ಗಾಹಿಪತ ಹೋ...', ಧೃತ್ ತೀನತಾಲ್‌ದಲ್ಲಿ `ರೈನ ದಿನ ಕೈಸಿ ಕಟಿ...' ಪ್ರಸ್ತುತಪಡಿಸಿದರು. ತಬಲಾದಲ್ಲಿ ಶ್ರೀಧರ ಮಾ0ಡ್ರೆ ಹಾಗೂ ಹಾರ್ಮೋನಿಯಂದಲ್ಲಿ ಗುರುಪ್ರಸಾದ ಹೆಗಡೆ ಸಾಥ್ ನೀಡಿದರು.
ನಂತರ ಬೆಂಗಳೂರಿನ ಸಿತಾರವಾದಕ ಗೋಪಾಲಕೃಷ್ಣ ಬಿ.ಎಂ. ಅವರ ಸಿತಾರ ತಂತುಗಳ ಝೇಂಕಾರ ಹೊರಹೊಮ್ಮಿತು. ಆಲಾಪ್, ಜೋಡ ಹಾಗೂ ವೈವಿಧ್ಯಮಯ ಗತ್‌ಗಳನ್ನು ನುಡಿಸಿದರು. ಅವರಿಗೆ ಯುವ ಕಲಾವಿದ ರಘುನಂದನ ಹೂಗಾರ ತಬಲಾ ಸಾಥ್ ನೀಡಿದರು.