ಗಂಗಾವತಿ ತಾಲೂಕಿನ ವಡ್ಡರಹಟ್ಟಿ ರಾಜಪ್ಪ ಸಾಹುಕಾರ್ ಕಾಲನಿ ಗಂಡುಗಲಿ ಕುಮಾರರಾಮ ವೃತ್ತದಲ್ಲಿ ಕುಮಾರರಾಮ ಜಯಂತಿ ಗುರುವಾರ ಆಚರಿಸಲಾಯಿತು. ವಾಲ್ಮೀಕಿ ನಾಯಕ ಸಮಾಜದ ಹಿರಿಯ ಮುಖಂಡ ಟಿ. ದುರುಗಪ್ಪ ನಾಯಕ ಸಾಹುಕಾರ್, ುಮಾರರಾಮ ಸೇನೆ ಅಧ್ಯಕ್ಷ ಎಚ್.ರಾಜೇಶನಾಯಕ ದೊರೆ ಇತರರಿದ್ದರು. 
ಜಿಲ್ಲೆ

ಜನಪರ ಆಡಳಿತ ನೀಡಿದ ಕುಮಾರರಾಮ

ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ರಾಜಪ್ಪ ಸಾಹುಕಾರ್ ಕಾಲನಿ ಗಂಡುಗಲಿ ಕುಮಾರರಾಮ ವೃತ್ತದಲ್ಲಿ ಕುಮಾರರಾಮ ಜಯಂತಿ ಗುರುವಾರ ಆಚರಿಸಲಾಯಿತು.

ಅಖಿಲ ಕರ್ನಾಟಕ ಹರಿಹರ ಹಕ್ಕಬುಕ್ಕ ನಾಯಕ ಮಹಾವೇದಿಕೆ ಮತ್ತು ಗಂಡುಗಲಿ ಕುಮಾರರಾಮ ಸೇನೆ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಲಾಯಿತು.

ಮುಖಂಡ ಟಿ. ದುರುಗಪ್ಪ ನಾಯಕ ಸಾಹುಕಾರ್ ಮಾತನಾಡಿ, ಕುಮಾರರಾಮ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ಜನರ ಮೆಚ್ಚುಗೆ ಪಡೆದಿದ್ದರು. ಕುಮಾರರಾಮನ ಜಾತ್ರೆ ನಡೆಯುತ್ತಿರುವುದು ಶ್ರೇಷ್ಟತೆಗೆ ನಿದರ್ಶನವಾಗಿದೆ ಎಂದರು.


ಸೇನೆ ಅಧ್ಯಕ್ಷ ಎಚ್.ರಾಜೇಶನಾಯಕ ದೊರೆ, ಮುಖಂಡರಾದ ಸೋಮನಾಳ ಹನುಮಂತಪ್ಪ, ಟಿ. ರಂಗಪ್ಪ , ಸೋಮಶೇಖರ ಗುರಿಕಾರ, ಟಿ.ವೆಂಕಟೇಶ ನಾಯಕ, ಹರನಾಯಕ, ಟಿ.ಸಂತೋಷ, ರಾಜುನಾಯಕ ಇತರರಿದ್ದರು.