ಕಲಬುರಗಿ: ಜನಪದ ಬದುಕನ್ನು ತಿಳಿಸುವ ಸಂಸತಿ. ಅದರಲ್ಲಿ ಅವಿಭಕ್ತ ಕುಟುಂಬ ಅಡಗಿದೆ. ಹಾಡು, ನೃತ್ಯ, ಬಿತ್ತನೆಯಿಂದ ರಾಶಿವರೆಗಿನ ಸಂಭ್ರಮವಿದೆ. ತಾಯಿಯ ಪ್ರೀತಿಯನ್ನು ಜನಪದ ಸಾಹಿತ್ಯದಲ್ಲಿ ಕಾಣಬಹುದು ಎಂದು ಗುಲ್ರ‍್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆ ನರ‍್ದೇಶಕ ಪ್ರೊ.ಎಚ್.ಟಿ.ಪೋತೆ ಹೇಳಿದರು.
ನಗರದ ವಿಜ್ಞಾನೇಶ್ವರ ಕಾನೂನು ಕಾಲೇಜಿನಲ್ಲಿ ಇತ್ತೀಚೆಗೆ ರ‍್ಪಡಿಸಿದ್ದ ಜಾನಪದ ಉತ್ಸವ ನಮ್ಮ ಸಂಸತಿ ನಮ್ಮ ಹೆಮ್ಮೆ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ಶಿವಾನಂದ ಲೇಂಗಟಿ ಮಾತನಾಡಿ, ಜಾನಪದದ ವಾಖ್ಯಾನ ಧರ‍್ಮಿಕ ಆಚರಣೆ, ಕಥೆಗಳು, ನೃತ್ಯ ಮತ್ತು ಇತರ ಕಲಾ ಪ್ರಕಾರಗಳಂತಹ ಸಾಂಸತಿಕ ಕಲಾಕೃತಿಗಳ ಗುಂಪಾಗಿದೆ. ಕಥೆ, ಹಾಡು, ಹಾಸ್ಯ, ಒಗಟು, ಗಾಧೆ, ನೃತ್ಯ ಮತ್ತು ಮಾತಿನಲ್ಲೇ ಅಡಕವಾಗಿದೆ. ಹಿರಿಯರು ಈ ಅಮೂಲ್ಯ ಸಂಪತ್ತನ್ನು ಉಳಿಸಿಕೊಂಡು ಬಂದಿದ್ದಾರೆ ಎಂದರು.
ಮುಖ್ಯ ಅತಿಥಿ ಎಂ.ಬಿ.ನಿಂಗಪ್ಪ ಮಾತನಾಡಿ, ಜಾನಪದ ಸಾಹಿತ್ಯದ ಮಹತ್ವ ಅರಿತು ಸಾಗಬೇಕು. ರ‍್ಕಾರದಿಂದ ಪ್ರತಿ ಕಾಲೇಜಿನಲ್ಲಿ ಜಾನಪದ ಉತ್ಸವಗಳನ್ನು ಹಮ್ಮಿಕೊಳ್ಳಬೇಕು. ಮನುಷ್ಯ ಹುಟ್ಟಿನಿಂದ ಸಾಯುವರೆಗಿನ ಸಂಸ್ಕಾರಗಳನ್ನು ಹಾಡುಗಳ ಮೂಲಕ ವಿವರಿಸಿದರು.
ಹಾಸ್ಯ ಕಲಾವಿದ ರಾಜಶೇಖರ ಅವರು ಹಾಸ್ಯ ಚಟಾಕಿ ಜತೆಗೆ ಗಿಗಿ ಪದಗಳು, ಸೋಬಾನೆ ಹಾಡುಗಳು, ಒಡಪುಗಳು ಹೇಳುವ ಮೂಲಕ ವಿದ್ಯರ‍್ಥಿಗಳಿಗೆ ಜನಪದ ಸಾಹಿತ್ಯದ ಮೂಲ ಪರಿಚಯಿಸಿದರು.
ಪ್ರಾಧ್ಯಾಪಕ ನಿಂಗಪ್ಪ ಕುದರಿಹಾಳ ನಿರೂಪಣೆ ಮಾಡಿದರು. ಸಂಚಾಲಕಿ ಡಾ.ಆಶಾ ಆಫ್ರೀನ ಪ್ರಾಸ್ತಾವಿಕ ಮಾತನಾಡಿದರು. ಐಕ್ಯೂ ಎಸಿ ಸಂಚಾಲಕ ರೇಣುಕಾ ಸಾಸನಮರಿ ಇತರರಿದ್ದರು. ಡಾ.ರೇಖಾ ಚವ್ಹಾಣ್, ವಾಣಿ ಮರಡಿ ತರ‍್ಪುಗಾರರಾಗಿದ್ದರು. ಅಶ್ವಿನಿ, ಭಾಗ್ಯಶ್ರೀ ಪ್ರರ‍್ಥನಾ ಗೀತೆ ಹಾಡಿದರು.