ಜಿಲ್ಲೆ

ಜನಪದಕ್ಕೆ ಜೀವ ತುಂಬಿ

ಬಾಗಲಕೋಟೆ: ಇಂದಿನ ಆಧುನಿಕ ಪ್ರಪಂಚದಲ್ಲಿ ಪಾಶ್ಚಾತ್ಯ ಸಾಹಿತ್ಯ ಮಾರು ಹೋಗುತ್ತಿರುವ ಜನರು ಗತಕಾಲದ ವೈಭವವನ್ನೇ ಮರೆಯುತ್ತಿದ್ದಾರೆ. ಪ್ರಾಚೀನ ಕಾಲದ ವೈಭವ ಉಳಿಸಲು ಜನಪದ ಸಾಹಿತ್ಯಕ್ಕೆ ಜೀವ ತುಂಬಬೇಕು ಎಂದು ವಿದ್ಯಾ ಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ್ ಹೇಳಿದರು.

ನವನಗರದ ಅಮೃತಾ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರ ಶಾಲಾ ಮಟ್ಟದ ಜಾನಪದ ನೃತ್ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಜನಪದ ನಮ್ಮ ನಾಡಿನ ಜೀವನಾಡಿ ಇದ್ದಂತೆ. ನಮ್ಮ ಸೊಗಡನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆದಾಗ ಮಾತ್ರ ಪರಂಪರೆ ಸಾಕ್ಷಿಕರಿಸಲು ಸಾಧ್ಯ. ತಾಯಿ ಬೇರಿನಂತಿರುವ ಜನಪದ ಸಾಹಿತ್ಯಕ್ಕೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು ಎಂದರು.

ಜಾನಪದ ನೃತ್ಯದಲ್ಲಿ ಬಾಗಲಕೋಟೆಯ ವಿವಿಧ ಶಾಲೆಯ ಮಕ್ಕಳು ಭಾಗವಹಿಸಲಿದ್ದರು. ಆರ್ ಎಚ್.ಪಾಟೀಲ ಮೆಮೋರಿಯಲ್ ಸ್ಕೂಲ್ ಪ್ರಥಮ, ಎಂ ಆರ್ ಜಿ ಶಾಲೆ ದ್ವಿತೀಯ, ಅಮೃತ ಇಂಟರ ನ್ಯಾಷನಲ್ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು.

ಮಂಜುನಾಥ ಬಡಿಗೇರ ಮತ್ತು ಜಯಾ ಕಾಂಬಳೆ ತೀರ್ಪುಗಾರರಾಗಿ ಭಾಗವಹಿಸಿದ್ದರು. ಶಾಲೆಯ ಪ್ರಾಚಾರ್ಯ ಎಸ್.ಎ. ಹಳ್ಳೂರ. ನೃತ್ಯ ಸಂಯೋಜಕಿ ತನುಜಾ ಪಿ, ವಿಜಯಲಕ್ಷ್ಮೀ ಎಸ್., ಶಾರದಾ, ದೈಹಿಕ ಶಿಕ್ಷಕ ರಾಜು ಬಿ ಉಪಸ್ಥಿತರಿದ್ದರು.