ವಿಜಯವಾಣಿ ಸುದ್ದಿಜಾಲ ಧಾರವಾಡ
ಜನಪದ ಸಾಹಿತ್ಯ ಎಲ್ಲ ಸಾಹಿತ್ಯಕ್ಕೆ ಮೂಲ ತಾಯಿ ಬೇರಾಗಿದೆ ಎಂದು ಜಾನಪದ ವಿಂದ್ವಾಸ ಡಾ. ರಾಮು ಮೂಲಗಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಕಲಾ ಕಾಲೇಜಿನ ಕನ್ನಡ ವಿಭಾಗ, ಕರ್ನಾಟಕ ಸಂಘ ಮತ್ತು ಐಕ್ಯೂಎಸಿ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಜನಪದದಲ್ಲಿ ಪುರುಷ ಸಂಸ್ಕೃತಿ ಕುರಿತು ಅವರು ಮಾತನಾಡಿದರು.
ಜನಪದ ತಲೆ ತಲೆಮಾರಿನಿಂದ ಬಂದಿದೆ. ನಮ್ಮ ಹಿರಿಯರು ತಮ್ಮ ಜೀವನದ ಅನುಭವವನ್ನು ಜನಪದ ಮೂಲಕ ಹೇಳಿದ್ದಾರೆ. ಜನಪದಕ್ಕೆ ಗಟ್ಟಿ ಧ್ವನಿಯ ಮೂಲಕ ಗ್ರಾಮೀಣರು ಹಾಡುತ್ತಿದ್ದರು. ಜನರು ಜನಪದದ ಶಬ್ದಗಳನ್ನು ಜೀವನದ ಸಂಕೇತಗಳನ್ನಾಗಿ ಬಳಸುತ್ತಿದ್ದರು. ಇಂದಿನ ಯುವಜನ ಮೂಲ ಜಾನಪದದ ಸಂಸ್ಕೃತಿ ಉಳಿಸಿ ಬೆಳೆಸುವ ಅವಶ್ಯತೆ ಇದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಮಹಾದೇವಿ ಹಿರೇಮಠ ಮಾತನಾಡಿ, ಜನಪದ ಜೀವನದ ಅವಿಭಾಜ್ಯ ಅಂಗ. ಜೀವನದ ಅನುಭವವೇ ಜಾನಪದವಾಗಿದೆ. ಜನಪದರ ಬದಕು ವಿಭಿನ್ನವಾಗಿತ್ತು. ಇಂದಿನ ಕೃತಕ ಬದುಕಿನಲ್ಲಿ ಜನಪದ ಉಳಿಸಬೇಕಾಗಿದೆ ಎಂದರು.
ಕರ್ನಾಟಕ ಕಾಲೇಜಿನ ಐಕ್ಯೂಎಸಿ ಕೋಶದ ಸಂಯೋಜಕ ಡಾ.ಐ.ಸಿ. ಮುಳಗುಂದ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಟಪ ಶೈಲಜಾ ಅಮರಶೆಟ್ಟಿ, ಶಂಕರ ಕುಂಬಿ, ಡಾ.ವಿ ಶಾರದಾ, ಡಾ.ಮುಕುಂದ ಲಮಾಣಿ, ಡಾ. ಸಿ.ಬಿ.ಐನಳ್ಳಿ, ರೇಖಾ ಅಂತಕ್ಕನವರ, ಶಾರದಾ ಕೌದಿ, ಜ್ಯೋತಿ ಭಾವಿಕಟ್ಟಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಇದ್ದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದದರು.