ಕಲಬುರಗಿ: ಗ್ರಾಮೀಣ ಸೊಗಡು ಬಿಂಬಿಸುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಸಲಹೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಡಿ ನಗರದ ಕನ್ನಡ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಜಾನಪದ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕಾರ್ಯಕ್ರಮದಲ್ಲಿ ಜನಪದರ ಹಾಡು ಕೇಳಿ ಸಂತಸವಾಯಿತು. ಜನಪದ ಕರ್ನಾಟಕದ ಬಹುದೊಡ್ಡ ಕಲೆ ಎಂದರು.
ಮಕ್ಕಳ ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ಮಾತನಾಡಿ, ಜಾನಪದ ಸಾಹಿತ್ಯ ಮತ್ತು ಜೀವನ ಮೌಲ್ಯ ಕುರಿತು ಜಾನಪದ ಜನರ ಪದವಾಗಿ ಸಾಂಸ್ಕೃತಿಕ ಮೌಲ್ಯಗಳ ನೆಲೆಗಟ್ಟಿನ ಮೇಲೆ ಬೆಳೆದು ಬಂದಿದೆ. ಅದರ ಮೌಲ್ಯ ಅಜರಾಮರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯP್ಷÀತೆ ವಹಿಸಿದ್ದ ಜಾನಪದ ಪರಿಷತ್ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ್ ಮಾತನಾಡಿ, ಜಾನಪದ ಕಲೆಗಳು ನಮ್ಮ ಸಂಸ್ಕೃತಿ, ಸಂಭ್ರಮ ಭಾವೈಕ್ಯದ ನುಡಿಗಟ್ಟಾಗಿದೆ ಎಂದರು.
ಯುವ ನಾಯಕ ಶರಣಗೌಡ ಅಲ್ಲಮಪ್ರಭು ಪಾಟೀಲ್, ಡಾ.ವಿಶಾಲಾಕ್ಷಿ ಕರಡ್ಡಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಭಾನುಕುಮಾರ ಗಿರೇಗೋಳ, ಡಾ.ಕೆ.ಎಸ್. ಬಂಧು, ಶಿವರಾಜ ಅಂಡಗಿ, ಡಿ.ಪಿ. ಸಜ್ಜನ್ ಇದ್ದರು. ರೇಣುಕಾ ಎಸ್. ಸ್ವಾಗತಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ ವಂದಿಸಿದರು. ಡಾ.ಹಣಮಂತ್ರಾಯ ರಾಂಪುರೆ ನಿರೂಪಣೆ ಮಾಡಿದರು. ಬಯಲಾಟ ಸೇರಿ ವಿವಿಧ ಪದಗಳನ್ನು ಹಾಡುವ ಮೂಲಕ ಕೇಳುಗರ ಮನತಣಿಸಿದ ಕಲಾವಿದರನ್ನು ಸತ್ಕರಿಸಲಾಯಿತು.