ಹಾರೂಗೇರಿ: ಸುತ್ತಮುತ್ತಲಿನ ಸಾರ್ವಜನಿಕರ ಹಿತದೃಷ್ಟಿ ಯಿಂದ 1977ರಲ್ಲಿ ಸ್ಥಾಪನೆಗೊಂಡ ಜನತಾ ಸಹಕಾರಿ ಬ್ಯಾಂಕ್ ಎಲ್ಲರ ಸಹಕಾರದಿಂದ ಮುನ್ನಡೆಯುತ್ತಿದೆ ಎಂದು ಅಧ್ಯಕ್ಷ ರಾಜಶೇಖರ ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕ್ ಲಾಭದಲ್ಲಿ ನಡೆಯುತ್ತಿದ್ದು, ರಾಯಬಾಗ, ಉಗಾರ ಖುರ್ದ ಮತ್ತು ಅಥಣಿಯಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಶಾಖೆ ಪ್ರಾರಂಭಿಸುವ ಮೂಲಕ ಹೆಮ್ಮರವಾಗಿ ಬೆಳೆದು ನಿಂತಿದೆ. 8 ವರ್ಷಗಳಿಗೊಮ್ಮೆ ಬ್ಯಾಂಕ್ ಅಧ್ಯಕ್ಷೀಯ ಸ್ಥಾನ ಬದಲಾವಣೆಯಾಗಬೇಕೆಂಬ ಆರ್‌ಬಿಐನ ಸುತ್ತೋಲೆ ಪ್ರಕಾರ 13 ಜನ ಆಡಳಿತ ಮಂಡಳಿಯಲ್ಲಿ ಯಾರೇ ಅಧ್ಯಕ್ಷರಾದರೂ ಸ್ವ-ಇಚ್ಚೆಯಿಂದ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಸಂಸ್ಥೆ ವ್ಯವಸ್ಥಾಪಕ ಅಮರಶೆಟ್ಟಿ, ಶಂಕರ ಮಾನಶೆಟ್ಟಿ, ಪ್ರಭುಲಿಂಗ ಪಾಲಬಾವಿ, ಭೀಮಗೌಡ ಕರ್ಣವಾಡಿ, ಕಲ್ಲಪ್ಪ ಕೊಕಟನೂರ, ತಮಣಪ್ಪ ತೇಲಿ, ಚಂದ್ರಕಾಂತ ಬೋಸಲೆ, ಸಂಜು ಅವಕ್ಕನವರ, ಸಂಗಣ್ಣ ಸವದತ್ತಿ, ಅಶೋಕ ಗುಡೋಡಗಿ, ಚಂದ್ರಶೇಖರ ಗುಡಸಿ, ಮುರಗೇಪ್ಪ ಠಕ್ಕಣ್ಣವರ, ಮಲ್ಲಪ್ಪ ಮೋಪಗಾರ, ವಿಶ್ವನಾಥ ಕಶೆಟ್ಟಿ, ಹನುಮಂತ ಮಡಿವಾಳ, ರಾಮಪ್ಪ ನಾಯಿಕ, ವಿನಾಯಿಕ ಮೂಡಸಿ, ಕಾಂತು ಬಾಡಗಿ ಇತರರಿದ್ದರು.