ಬಳ್ಳಾರಿ : ಇಲ್ಲಿನ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ( ಜನತಾ ಬಜಾರ್)ನ ಕಚೇರಿಯಲ್ಲಿ 69ನೇ ಸರ್ವ ಸದಸ್ಯರ ಸಭೆಯು ಜಿ. ನೀಲಕಂಠಪ್ಪ ಅಧ್ಯಕ್ಷತೆ ಯಲ್ಲಿ ಸೋಮವಾರ ನಡೆಯಿತು.
ವಾರ್ಷಿಕ ಮಹಾಸಭೆಯ ನೋಟಿಸ್ ಪ್ರಕಾರ 2023 - 24ರ ಸಾಲಿನ ಆಡಳಿತ ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಅಲ್ಲದೆ, 2024-25ರ ಸಾಲಿನ ಮುಂಗಡ ಪತ್ರ ಮತ್ತು 2023-24ರ ಸಾಲಿನ ಮುಂಗಡ ಪತ್ರದ ಹೆಚ್ಚುವರಿ ಖರ್ಚುಗಳಿಗೆ ಹಾಗೂ 2024-25 ಪ್ರಸ್ತಕ ಸಾಲಿಗೆ ಸಿದ್ದಪಡಿಸಲಾದ ಸಂಘದ ಕಾರ್ಯಚಟುವಟಿಕೆಗಳಿಗೆ ಅನುಮೋದನೆ ಪಡೆಯಲಾಯಿತು. ಉಪಾಧ್ಯಕ್ಷೆ ನಸೀಮಾ ಬೇಗಂ, ನಿರ್ದೇಶಕರಾದ ಕೆ. ವೆಂಕಟಸ್ವಾಮಿ, ಕೆ. ಎ. ವೇಮಣ್ಣ, ಎಸ್. ಮುಜಾಹಿದ್ ಅಲಿ, ಪಿ. ದಾನರೆಡ್ಡಿ, ಪಿ. ಗುರುಪ್ರಸಾದ್‌ರೆಡ್ಡಿ, ಪ್ರದೀಪರೆಡ್ಡಿ ಇದ್ದರು.