ಬಾಗಲಕೋಟೆ : ಬುಡಕಟ್ಟು ಗ್ರಾಮಗಳನ್ನು ಸುಧಾರಣೆ ಮಾಡಲು ಪ್ತಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ ಅ.2 ರಂದು ಚಾಲನೆ ನೀಡಲಿದೆ ಎಂದು ಜಿಲ್ಲಾಧಿಕಾರಿಗಳಾದ ಜಾನಕಿ ಕೆ.ಎಂ. ಹೇಳಿದರು.
ಶನಿವಾರ ಜಿಲ್ಲಾಧಿಕಾರಿ ಸಭಾಂಗಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಬುಡಕಟ್ಟು ಸಮುದಾಯಗಳ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಸುಧಾರಿಸಲು 79.156 ಕೋಟಿ ರೂ. ವೆಚ್ಚವಾಗಲಿದೆ ಎಂದರು.
ಜಿಲ್ಲೆಯಲ್ಲಿ 5 ಬ್ಲಾಕ್ ಗಳಿದ್ದು, ಹಲಗಲಿ, ಪರ್ವತಿ, ಹಾನಪುರ ಎಸ್.ಪಿ, ನರಸಾಪೂರ, ಆಡಗಲ್, ಹೂವಿನಹಳ್ಳಿ , ಮುರಡಿ ಗ್ರಾಮಗಳು ಒಳಗೊಂಡಿದ್ದು, ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆಯಡಿ ಮೂಲ ಸೌಕರ್ಯಗಳನ್ನು ಸಕ್ರಿಯಗೊಳಿಸುವುದು, ಆರ್ಥಿಕ ಸಬಲೀಕರಣದ ಪ್ರಚಾರ , ಉತ್ತಮ ಶಿಕ್ಷಣ ಪ್ರವೇಶ, ಆರೋಗ್ಯಕರ ಜೀವನ ಈ ಯೋಜನೆಯಲ್ಲಿ ಒಳಗೊಂಡಿದೆ ಎಂದು ತಿಳಿಸಿದರು.