ಚಿಕ್ಕಮಗಳೂರು: ಶಿರವಾಸೆ ಹಾಗೂ ಸುಗುಡುವಾನಿ ಗ್ರಾಮದ ಜನವಸತಿ ಪ್ರದೇಶ ಕೃಷಿ ಪ್ರದೇಶದ ಸರ್ವೆ ನಂಬರ್ ಗಳನ್ನು ಸೆಕ್ಷನ್ ೪(೧), ಡೀಮ್ಡ್ ಫಾರೆಸ್ಟ್ ಗೆ ಸೇರಿಸಿರುವುದನ್ನು ವಿರೋಧಿಸಿ ನಾಗರಿಕ ಮತ್ತು ರೈತ ಹೋರಾಟ ಸಮಿತಿಯಿಂದ ಆ. ೪ರಂದು ಬೆಳಗ್ಗೆ ೧೧ಗಂಟೆಗೆ ಶಿರವಾಸೆಯಲ್ಲಿ ಜನಜಾಗೃತಿ ಜಾಥ ಮತ್ತು ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ನಾಗರಿಕ ಮತ್ತು ರೈತ ಹೋರಾಟ ಸಮಿತಿ ಸಂಚಾಲಕ ವಾಸು ಪೂಜಾರಿ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦ ಗಂಟೆಗೆ ಶಿರವಾಸೆಯ ಇಂದಿರಾನಗರದಿAದ ಗ್ರಾಮ ಪಂಚಾಯಿತಿವರೆಗೆ ಜನಜಾಗೃತಿ ಜಾಥ ನಡೆಯಲಿದೆ. ಬಳಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬೃಹತ್ ಜನಜಾಗೃತಿ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಶಿರವಾಸೆ ಭಾಗದ ಶಿರವಾಸೆ, ಗಾಳಿಗುಡ್ಡೆ, ಕಳವಾಸೆ, ಕೊಂಕಳಮನೆ, ಸಿದ್ದಾಪುರ ಗ್ರಾಮಗಳ ವ್ಯಾಪ್ತಿಯ ಹಲವು ಸರ್ವೆ ನಂಬರ್ ಗಳನ್ನು ಸೆಕ್ಷನ್ ೪(೧) ಹಾಗೂ ಡೀಮ್ಡ್ ಫಾರೆಸ್ಟ್ ಗೆ ಸೇರಿಸಲಾಗಿದೆ. ಇದರಿಂದ ಕಾಫಿ ಬೆಳೆಗಾರರು, ರೈತರು, ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆಯ ಈ ನಿರ್ಧಾರದಿಂದ ಸ್ಥಳೀಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಉz್ದೆÃಶದಿಂದ ಜಾಥ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಶಿರವಾಸೆ ಭಾಗದ ಭೂಮಿಯನ್ನು ಸೆಕ್ಷನ್ ೪(೧), ಡೀಮ್ಡ್ ಫಾರೆಸ್ಟ್ ಗೆ ಸೇರಿಸಿರುವುದರಿಂದ ೯೪ಸಿ, ನಮೂನೆ ೫೩, ೫೭ರ ಅರ್ಜಿಗಳ ವಿಲೇವಾರಿಯಾಗುತ್ತಿಲ್ಲ. ಇ ಖಾತೆಯೂ ಆಗುತ್ತಿಲ್ಲ. ಜೊತೆಗೆ ಪೊಡಿಯೂ ಆಗುತ್ತಿಲ್ಲ. ನಿವೇಶನ ರೈತರಿಗೆ ನಿವೇಶನ ಮಂಜೂರಾಗುತ್ತಿಲ್ಲ. ನಿವೇಶನ ಇಲ್ಲದ ಕಾರಣದಿಂದ ವಸತಿ ಯೋಜನೆಗಳಲ್ಲಿ ಮನೆಗಳೂ ಮಂಜೂರಾಗುತ್ತಿಲ್ಲ. ಇದಲ್ಲದೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳು ಮಂಜೂರಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಜನಜಾಗೃತಿ ಜಾಥವನ್ನು ಸ್ಥಳೀಯ ಗ್ರಾಪಂ ಅಧ್ಯಕ್ಷ ವಿ.ಆರ್. ರಘುನಾಥ್ ಉದ್ಘಾಟಿಸಲಿದ್ದಾರೆ. ಸಮಾವೇಶವನ್ನು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯ್ ಕುಮಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರ ಕೆ.ಆರ್.ಚಂದ್ರೇಗೌಡ ವಹಿಸಲಿದ್ದಾರೆ. ಸೆಕ್ಷನ್ ೪(೧), ಡೀಮ್ಡ್ ಫಾರೆಸ್ಟ್ ಬಗ್ಗೆ ಕೆ.ಕೆ.ರಘು ವಿಷಯ ಮಂಡಿಸಲಿದ್ದಾರೆ. ಸಮಾವೇಶದಲ್ಲಿ ಪ್ರಮುಖರಾದ ಎಚ್.ಎಸ್. ಮಲ್ಲೇಶ್, ಎಸ್.ಎಂ. ದೇವಣ್ಣಗೌಡ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರೇಗೌಡ, ನರೇಂದ್ರ ಉಪಸ್ಥಿತರಿದ್ದರು.